Thursday, March 30, 2023

BREAKING NEWS : ರಾಜ್ಯದ 5 ಮತ್ತು 8 ನೇ ತರಗತಿಗೆ ‘ಪಬ್ಲಿಕ್ ಪರೀಕ್ಷೆ’ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 5 ಮತ್ತು 8...
More

  Latest Posts

  ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

  ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

  ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

  ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

  ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

  ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

  ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

  ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

  ಈ ಆಹಾರಗಳು ದೇಹ ಒಣಗಿಸುತ್ತವೆ, ಎಚ್ಚರ..!

  ಬೇಕಾದಷ್ಟು ನೀರು ಕುಡಿಯದಿದ್ದರೆ ದೇಹಕ್ಕಾಗುವ ಹಾನಿ ಅಷ್ಟಿಷ್ಟಲ್ಲ. ದೇಹಕ್ಕೆ ಸಾಕಾಗುವಷ್ಟು ನೀರು ಕುಡಿಯದಿದ್ದರೆ ನಿರ್ಜಲೀಕರಣ ಉಂಟಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ನಿಮಗೆ ಗೊತ್ತೇ? ನಾವು ಸೇವಿಸುವ ಕೆಲವು ಆಹಾರಗಳೂ ನಿರ್ಜಲೀಕರಣ ಉಂಟು ಮಾಡಬಲ್ಲವು.
  ದೇಹಕ್ಕೆ ನೀರು ಅತ್ಯಗತ್ಯ. ಬೇಸಿಗೆ ಮಾತ್ರವಲ್ಲ, ಎಲ್ಲ ಕಾಲದಲ್ಲೂ ದೇಹ ನಿರ್ಜಲೀಕರಣಕ್ಕೆ ತುತ್ತಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ನೀರು ಕುಡಿಯಲು ಬೇಸರ. ಬಿಸಿ ಇರುವ ಪಾನೀಯವನ್ನಷ್ಟೇ ಸೇವಿಸಲು ದೇಹ ಬಯಸುತ್ತದೆ. ಚಳಿಗಾಲದಲ್ಲೂ ಅಷ್ಟೇ. ಚಳಿಯ ವಾತಾವರಣಕ್ಕೆ ಬಿಸಿಬಿಸಿ ಏನನ್ನಾದರೂ ಸೇವಿಸಬೇಕೆಂದು ಚಹಾ, ಕಾಫಿ ಸೇವಿಸುವವರು ಹೆಚ್ಚು. ಆದರೆ, ಇದರಿಂದ ದೇಹಕ್ಕೆ ನೀರಿನ ಕೊರತೆಯಾಗುತ್ತದೆ. ಅಗತ್ಯವಿರುವಷ್ಟು ನೀರು ಪೂರೈಕೆ ಆಗುವುದಿಲ್ಲ.
  ಅಷ್ಟಕ್ಕೂ, ಕೇವಲ ನೀರು ಕುಡಿಯುವುದರಿಂದ ಮಾತ್ರವೇ ದೇಹ ನಿರ್ಜಲವಾಗದಂತೆ ನೋಡಿಕೊಳ್ಳಲು ಸಾಧ್ಯವಿಲ್ಲ. ಕೆಲವು ಆಹಾರಗಳು ನಮ್ಮ ದೇಹದ ವಿರುದ್ಧವಾಗಿ ಕೆಲಸ ಮಾಡುತ್ತವೆ. ಅವು ದೇಹವನ್ನು ನಿರ್ಜಲಗೊಳಿಸುತ್ತವೆ. ಕೋಶಗಳಲ್ಲಿರುವ ದ್ರವಾಂಶವನ್ನೂ ಎಳೆಯಬೇಕಾದ ಅನಿವಾರ್ಯತೆಯನ್ನು ವಿವಿಧ ಅಂಗಾಂಗಗಳಿಗೆ ಸೃಷ್ಟಿಸುತ್ತವೆ. ಹೀಗಾಗಿ, ಅಂಥ ಆಹಾರಗಳನ್ನು ದೂರ ಇಡಬೇಕಾಗುತ್ತದೆ. ಆಹಾರ ತಜ್ಞೆ ಲವ್ ನೀತ್ ಬಾತ್ರಾ (Lavneet Batra) ಅವರು ದೇಹವನ್ನು ಒಣಗಿಸುವ ಕೆಲವು ಆಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಂತಹ ಆಹಾರಗಳು ಯಾವುವು ಎಂದು ನೋಡಿಕೊಳ್ಳಿ.

  •    ಕಾಫಿ 
  ಎಲ್ಲರಿಗೂ ತಿಳಿದಿರುವ ಸಂಗತಿ ಎಂದರೆ ಕಾಫಿಯಲ್ಲಿರುವ ಕೆಫೀನ್ ಅಂಶದಿಂದ ದೇಹ ನಿರ್ಜಲವಾಗುತ್ತದೆ. ಇಷ್ಟೇ ಅಲ್ಲ, ಕಾಫಿ ಮೂತ್ರವರ್ಧಕದಂತೆ ಕೆಲಸ ಮಾಡುತ್ತದೆ. ಅಂದರೆ, ಕಾಫಿ ಕುಡಿಯುವುದರಿಂದ ಮೂತ್ರದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ, ದೇಹಕ್ಕೆ ಸೋಡಿಯಂ ಅನ್ನು ಹೀರಿಕೊಳ್ಳುವ ಗುಣ ಕಡಿಮೆಯಾಗುತ್ತದೆ. ಪರಿಣಾಮವಾಗಿ, ದೇಹ ನಿರ್ಜಲವಾಗುತ್ತದೆ. 

  •    ಸೋಡಾ (Diet Soda)
  ಬಾಯಾರಿಕೆಗೆಂದು ಸೋಡಾ ಅಥವಾ ಯಾವುದೇ ರೀತಿಯ ಬಾಟಲಿಗಳಲ್ಲಿ ಲಭ್ಯವಾಗುವ ಪಾನೀಯಗಳನ್ನು ಕುಡಿಯುವುದರಿಂದ ದೇಹ ನಿರ್ಜಲವಾಗುವ ಸಮಸ್ಯೆ ಹೆಚ್ಚು. ಈ ಪಾನೀಯಗಳಲ್ಲಿರುವ ಕೃತಕ ಸಕ್ಕರೆ ಅಂಶದಿಂದ ಯಾವ ರೀತಿಯ ಪರಿಣಾಮವಾಗುತ್ತದೆ ಎಂದರೆ ಊಹಿಸಲು ಸಾಧ್ಯವಿಲ್ಲ. ಇದರಿಂದ ಜೀವಕೋಶಗಳಲ್ಲಿನ ನೀರಿನಂಶವೇ ಬತ್ತಿ ಹೋಗುತ್ತದೆ. ಹಾಗೆಯೇ ಇವುಗಳಲ್ಲೂ ಕೆಫೀನ್ ಅಂಶವಿರುತ್ತದೆ.

  •    ಆಲ್ಕೋಹಾಲ್ (Alcohol)
  ಆಲ್ಕೋಹಾಲ್ ನಿಂದ ದೇಹ ಭಾರೀ ನೀರಿನ ಕೊರತೆ ಎದುರಿಸುತ್ತದೆ. ಮಿದುಳಿನ ಮೇಲಾಗುವ ಪರಿಣಾಮಗಳಿಂದ ಹೀಗಾಗುತ್ತದೆ. 

  •    ಹೆಚ್ಚು ಪ್ರೊಟೀನ್ ಸೇವನೆ (High Protein Intake)
  ದೇಹಕ್ಕೆ ಪ್ರೊಟೀನ್ ಅತ್ಯಗತ್ಯ. ಆದರೆ, ಕೆಲವರು ಕೇವಲ ಪ್ರೊಟೀನ್ ಅಂಶವುಳ್ಳ ಆಹಾರ ಪದಾರ್ಥ ಮಾತ್ರ ಸೇವನೆ ಮಾಡುವ ಡಯೆಟ್ ಅನುಸರಿಸುತ್ತಾರೆ. ಆದರೆ, ಇದರಿಂದ ದೇಹ ನಿರ್ಜಲವಾಗುವ ಅಪಾಯವೂ ಇರುತ್ತದೆ. ಪ್ರೋಟೀನ್ ಆಹಾರದಲ್ಲಿರುವ ನೈಟ್ರೋಜೆನ್ ಅಂಶವನ್ನು ಚಯಾಪಚಯಗೊಳಿಸುವ ಕ್ರಿಯೆಯಲ್ಲಿ ದೇಹಕ್ಕೆ ಹೆಚ್ಚು ನೀರಿನ ಅಂಶ ಬೇಕಾಗುತ್ತದೆ. ಇದರಿಂದ ಕೋಶಗಳು ನೀರಿನ ಅಂಶವನ್ನು ಕಳೆದುಕೊಳ್ಳುತ್ತವೆ. ಜತೆಗೆ, ಪ್ರೊಟೀನ್ ಅಂಶವನ್ನೇ ಹೆಚ್ಚು ಸೇವಿಸಿದಾಗ ದೇಹ ನಿರ್ಜಲವಾಗುವ ಅನುಭವವಾಗುತ್ತದೆ. ಇದರಿಂದ ವಿವಿಧ ಸಮಸ್ಯೆಗಳು ಕಂಡುಬರಬಹುದು.

  •    ಉಪ್ಪುಭರಿತ ಸ್ನ್ಯಾಕ್ಸ್ (Salty Snacks)
  ಪ್ಯಾಕೆಟ್ ಗಳಲ್ಲಿ ಲಭ್ಯವಾಗುವ ಸ್ನ್ಯಾಕ್ಸ್ ಗಳು ಯಾವುದೇ ದೃಷ್ಟಿಕೋನದಿಂದಲೂ ಆರೋಗ್ಯಕ್ಕೆ ಪೂರಕವಾದವುಗಳಲ್ಲ. ಅವು  ಹಾನಿಯನ್ನೇ ತರುತ್ತವೆ. ಇಂತಹ ಆಹಾರದಲ್ಲಿರುವ ಅಧಿಕ ಉಪ್ಪಿನ ಅಂಶವನ್ನು ದಕ್ಕಿಸಿಕೊಳ್ಳಲು ನಮ್ಮ ಕಿಡ್ನಿ ದೇಹದ ಇತರೆಡೆಯಿಂದ ನೀರನ್ನು ಎಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದ ಇತರ ಅಂಗಗಳು ಹಾಗೂ ಕೋಶಗಳಲ್ಲಿ ದ್ರವ ಅಂಶದ ಕೊರತೆ ಉಂಟಾಗುತ್ತದೆ. ಉಪ್ಪನ್ನು ಹೆಚ್ಚು ಹೊಂದಿರುವ ಚಿಪ್ಸ್ ಸೇರಿದಂತೆ ಯಾವುದೇ ಆಹಾರದಿಂದ ದೇಹ ನಿರ್ಜಲವಾಗುತ್ತದೆ. 

  Latest Posts

  ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

  ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

  ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

  ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

  ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

  ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

  ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

  ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

  Don't Miss

  BIGG NEWS : ಕೇಂದ್ರ ಸಚಿವರ ಮಹತ್ವದ ಘೋಷಣೆ, 6 ತಿಂಗಳಲ್ಲಿ ‘ಟೋಲ್ ಪ್ಲಾಜಾ’ ಬಂದ್, ‘GPS’ ವ್ಯವಸ್ಥೆ ಜಾರಿ.!

  ನವದೆಹಲಿ : ನೀವು ಹೆದ್ದಾರಿಯಲ್ಲಿ ನಿಮ್ಮ ಕಾರಿನೊಂದಿಗೆ ಪ್ರಯಾಣಿಸಿದ್ರೆ, ಟೋಲ್ ಪ್ಲಾಜಾದಲ್ಲಿ ಕಳೆದ ಸಮಯವನ್ನ ನೀವು ಇಷ್ಟಪಡುವುದಿಲ್ಲ. ಟೋಲ್ ಪ್ಲಾಜಾದಲ್ಲಿ ತೆಗೆದುಕೊಳ್ಳುವ ಸರಾಸರಿ ಸಮಯವನ್ನ ಕಡಿಮೆ ಮಾಡಲು ಸರ್ಕಾರವು ನಿರಂತರವಾಗಿ...

  ಕುಂಪಲ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

  ಉಳ್ಳಾಲ: ಮೊಬೈಲ್ ಶೋರೂಂವೊಂದರಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅಕ್ಷಯ್ (25) ಆತ್ಮಹತ್ಯೆ...

  ಸುಳ್ಯ: ಮನೆ ಕಾಮಗಾರಿ ವೇಳೆ ತಡೆಗೋಡೆ ಕುಸಿತ – ಮೂವರು ಕಾರ್ಮಿಕರ ಸಾವು

  ಸುಳ್ಯ : ತಡೆಗೋಡೆ ಕಾಮಗಾರಿ ಮೇಳೆ ಗುಡ್ಡದ ಮಣ್ಣು ಜರಿದು ಮೂವರು ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆದಿದೆ. ಮೃತರನ್ನು ಸೋಮಶೇಖರ (45),...

  ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ -200 ರೂ. ಸಬ್ಸಿಡಿ.!

  ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ...

  5,8 ನೇ ತರಗತಿಗೆ ಬೋರ್ಡ್ ಪರೀಕ್ಷೆ : ಮತ್ತೆ ಮುಂದೂಡಲು ಹೈಕೋರ್ಟ್ ನಕಾರ

  ಬೆಂಗಳೂರು: ರಾಜ್ಯದ 5 ಮತ್ತು 8 ನೇ ತರಗತಿಗಳಿಗೆ ಮಾರ್ಚ್ 27 ರಿಂದ ನಡೆಯಲಿರುವ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು...