ಮಂಗಳೂರು: ಒಂದು ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕನ್ನು ಅಸಮರ್ಪಕವಾಗಿ ನಿರ್ಮಿಸಿರುವುದರಿಂದ ಅದು ಕುಸಿಯುವ ಸಾಧ್ಯತೆಯಿದ್ದು, ಇಲ್ಲಿನ ನಿವಾಸಿಗಳು ಅಪಾಯದ ಭೀತಿಯಲ್ಲಿದ್ದಾರೆ.
ಇದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಅರ್ಕುಳ ಗ್ರಾಮದ ವಳಚ್ಚಿಲ್ ಪದವು ಸಾರ್ವಜನಿಕರು ಅಡ್ಯಾರ್ ಗ್ರಾಮಪಂಚಾಯತ್‌ನ ಪಿಡಿಓಗೆಮನವಿ ಸಲ್ಲಿಸಿದ್ದಾರೆ. ಆದರು ಎಚ್ಚೆತ್ತುಕೊಳ್ಳದ ಅಧಿಕಾರಿಗಳು ,ತಕ್ಷಣ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಆಕ್ರೋಶ ವ್ಯಕ್ತಪಡಿಸಿದರು. ಅನಾಹುತ ನಡೆಯುವ ಮುನ್ನ ತಕ್ಷಣ ಕ್ರಮ ಕೈಗೂಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪುರವರ ನೇತ್ರತ್ವದಲ್ಲಿ ಉಗ್ರ ಹೊರಟ ನಡೆಸುವ ಎಚ್ಚರಿಕೆ ನೀಡಿದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.ಅಡ್ಯಾರ್ ಗ್ರಾಮ ಪಂಚಾಯತ್ ವತಿಯಿಂದ ಅರ್ಕುಳದಲ್ಲಿ ಭಾರೀ ಗಾತ್ರದ ಕುಡಿಯುವ ನೀರಿನ ಟ್ಯಾಂಕ ನ್ನು ಅಸಮರ್ಪಕವಾಗಿ ನಿರ್ಮಿಸಲಾಗಿರುವುದರಿಂದ ಇಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳು ಅಪಾಯಕ್ಕೆ ಸಿಲುಕಿದ್ದಾರೆ. ಟ್ಯಾಂಕ್‌ನ ಅಡಿಯಲ್ಲೇ ನೀರು ಹರಿಯವ ಮೋರಿ ಇದ್ದು, ಅದರ ಕೆಲಸ ಈಗ ನಡೆಯುತ್ತಿದೆ.
ಮೋರಿಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತಿರುವುದರಿಂದ ಮಣ್ಣಿನ ಸವೆತ ಉಂಟಾಗಿದೆ. ಇದರಿಂದ ಟ್ಯಾಂಕ್ ಅಪಾಯದ ಸ್ಥಿತಿಯಲ್ಲಿದ್ದು, ಕುಸಿದರೆ ಇಲ್ಲಿನ ನಿವಾಸಿಗಳ ಮನೆ ಮೇಲೇಯೇ ಬೀಳುವ ಸಾಧ್ಯತೆ ಇದೆ. ಟ್ಯಾಂಕ್ ರಚನೆಯಾಗುವ ಮುನ್ನವೇ ಪಂಚಾಯತ್ ಸದಸ್ಯರಲ್ಲಿ ಮಾಹಿತಿ ನೀಡಿದ್ದರೂ, ಕಾಮಗಾರಿ ಆರಂಭಿಸಲಾಗಿದೆ. ಇದರ ವ್ಯವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಅಡ್ಯಾರ್ ಪಂಚಾಯತ್ ಪಿಡಿಓರಲ್ಲಿ ಮನವಿಮಾಡಿದ್ದಾರೆ.
ಟ್ಯಾಂಕ್ ನಿರ್ಮಾಣದಲ್ಲಿ ಸಾಕಷ್ಟು ದೋಷಗಳು ಕಂಡುಬಂದಿದ್ದು, ಅದರ ಸುತ್ತಮುತ್ತ ವಿದ್ಯುತ್ ತಂತಿಗಳು, ಟ್ರಾನ್ಸರ್ ಕಂಬಗಳಿವೆ. ಅದರ ಸುತ್ತ ಮುತ್ತಲಿನಲ್ಲಿ ಮತ್ತು ಟ್ಯಾಂಕ್ ಅಡಿಯಲ್ಲೇ ಮನೆಗಳಿವೆ. ಟ್ಯಾಂಕ್ ಪಿಲ್ಲರ್‌ಗೆ ತಾಗಿಕೊಂಡೇ ಹಾದು ಹೋಗುವ ಚರಂಡಿ ಇದೆ. ಟ್ಯಾಂಕ್‌ನ ಅಡಿಭಾಗವು ಮಳೆನೀರಿಗೆ ಕೊಚ್ಚಿಹೋಗಿ ದೊಡ್ಡ ಸುರಂಗ ನಿರ್ಮಾ ರಾಗಿದ್ದು ಟ್ಯಾಂ ಕುಸಿಯುವ ಭೀತಿ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಟ್ಯಾಂಕ್ ನಿರ್ಮಾಣ ಮಾಡು ವಾಗ ಅಕ್ಕಪಕ್ಕದವರಿಗೆ ಯಾವುದೇ ಸಲಹೆ ಸೂಚನೆ ನೀಡದೆ ಸಣ್ಣ ಟ್ಯಾಂಕ್ ನಿರ್ಮಾಣ ಅಂತ ಸುಳ್ಳು ಹೇಳಿಇದೀಗ 1 ಲಕ್ಷ ಲೀಟರ್‌ನ ಬೃಹತ್ ಗಾತ್ರದ ಟ್ಯಾಂಕ್ ಅಸಮರ್ಪಕವಾಗಿ ನಿರ್ಮಿಸಿರುದರಿಂದ ಆತಂಕ ಪಡುವಂ ತಾಗಿದೆ ಎಂದು ಗ್ರಾಮಸ್ಥರು ಅಳಲುತೋಡಿಕೊಂಡಿದ್ದಾರೆ.
ವಾಲಿ ನಿಂತ ಟ್ಯಾಂಕ್‌ನ ಫೌಂಡೇಶನ್ ಬೆಡ್ ಸುಮಾರು 6 ಫೀಟ್‌ಷ್ಟು ಆಳಕ್ಕೆ ಹೋಗದೆ ಮೇಲ್ಬಾಗದಲ್ಲಿ ನೇತಾಡುತಿರುವುದು ಕಂಡುಬಂದಿದೆ. ಟ್ಯಾಂಕ್ ಫೌಂಡೇಶನ್ ಬೆಡ್‌ನ ಅಡಿಭಾಗ 6 ಪಿಲ್ಲರ್‌ಗಳನ್ನು ಇಳಿಸದೇ ಕೇವಲ ಒಂದೇ ಪಿಲ್ಲರ್ ಇಳಿಸಿದ್ದಾರೆ. ಟ್ಯಾಂಕ್ ನಿರ್ದಿಷ್ಟ ಒಂದು ಕಡೆಗೆ ವಾಲಿರುವುದು ದಿಗಿಲು ಹುಟ್ಟಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.