ಪುತ್ತೂರು; ಗುಡ್ಡಕ್ಕೆ ಕಟ್ಟಿಗೆ ತರಲು ಹೋದ ವ್ಯಕ್ತಿಯನ್ನು ಕಣಜದ ಹುಳುಗಳು ಬಲಿ ಪಡೆದ ಘಟನೆ ಒಳಮೊಗ್ರು ಗ್ರಾಮದ ಕೈಕಾರ ಎಂಬಲ್ಲಿ ನಡೆದಿದೆ. ಕೈಕಾರ ನಿವಾಸಿ ಮಾಯಿಲ ಎಂಬವರ ಪುತ್ರ ಗುರುವ(55ವ)ರವರು ಮೃತಪಟ್ಟವರು.ಅವರು ಜು.23ರಂದು ಮಧಾಹ್ನ ಕಟ್ಟಿಗೆಗೆಂದು ಮನೆ ಪಕ್ಕದ ಗುಡ್ಡೆಗೆ ಹೋದವರು ಅರ್ಧ ಗಂಟೆ ಬಿಟ್ಟು ಗುಡ್ಡೆಯಿಂದ ಓಡಿ ಬಂದಾಗ ಅವರ ಮುಖ, ಕುತ್ತಿಗೆ, ಮೈಯೆಲ್ಲ ಯಾವುದೋ ನೊಣ ಕಚ್ಚಿ ಊದಿಕೊಂಡಿರುವುದು ಕಂಡು ಬಂದಿತ್ತು.ಈ ಕುರಿತು ಅವರ ತಾಯಿ ಮಾಯಿಲು ಅವರು ವಿಚಾರಿಸಿದಾಗ ಪಿಲಿಕುಡೊಲು ಕಚ್ಚಿರುವುದಾಗಿ ಗುರುವ ಅವರು ತಿಳಿಸಿದ್ದರು. ತಕ್ಷಣ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಅವರು ಮೃತಪಟ್ಟಿದ್ದಾರೆ.ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
©2021 Tulunada Surya | Developed by CuriousLabs