Friday, July 19, 2024
spot_img
More

  Latest Posts

  ಮಂಗಳೂರು: ಸಾಕು ನಾಯಿಗೆ ವಿಷವಿಟ್ಟು ಕೊಂದ ಆರೋಪ- ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲು

  ಮಂಗಳೂರು: ಪೂರ್ವದ್ವೇಷದ ಹಿನ್ನೆಲೆ ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್  ಸಾಕು  ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ನಗರದ ಕಾಪಿಕಾಡ್  4  ನೇ  ಕ್ರಾಸ್‌ನಲ್ಲಿದ್ದ ವ್ಯಕ್ತಿಯೊಬ್ಬರ  4 1/2 ವರ್ಷದ ಡಾಬರ್ ಮನ್  ನಾಯಿ ಸಾಕುತ್ತಿದ್ದರು. ಜು.24 ರಂದು ನೆರೆಮನೆಯ ಭೀಮಯ್ಯ ಎಂಬುವವರು  ಪೂರ್ವ ದ್ವೇಷದ ಹಿನ್ನೆಲೆಯಲ್ಲಿ  ನಾಯಿಗೆ  ವಿಷ  ಪದಾರ್ಥವನ್ನು  ಹಾಕಿದ್ದಾರೆ.

  ಪರಿಣಾಮ ಜು.25 ರಂದು ನಾಯಿ ರಕ್ತ  ವಾಂತಿ  ಮಾಡಿಕೊಂಡು  ಮೃತಪಟ್ಟಿದೆ. ಈ ಹಿನ್ನೆಲೆ ನಾಯಿ ಸಾವಿಗೆ  ಕಾರಣನಾದ  ಬೀಮಯ್ಯ  ಎಂಬುವವರ  ವಿರುದ್ದ  ಸೂಕ್ತ  ಕಾನೂನು  ಕ್ರಮ ಕೈಗೊಳ್ಳಬೇಕಾಗಿ  ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss