ನವದೆಹಲಿ:ದ್ವೇಷ ಭಾಷಣ ಮಾಡಿದಾಗ ಯಾವುದೇ ದೂರುಗಳಿಲ್ಲದೆ ಪೊಲೀಸರು ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ
ಈ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದು,ಸಂವಿಧಾನದ ಪೀಠಿಕೆಯಲ್ಲಿ ಸೂಚಿಸಿರುವ ಭಾರತದ ಜಾತ್ಯತೀತ ಲಕ್ಷಣವನ್ನು ಸಂರಕ್ಷಿಸಲು ಭಾಷಣ ಮಾಡಿದ ವ್ಯಕ್ತಿಗಳ ಧರ್ಮವನ್ನು ಲೆಕ್ಕಿಸದೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
ದ್ವೇಷ ಭಾಷಣ ಪ್ರಕರಣಗಳನ್ನು ದಾಖಲಿಸುವಲ್ಲಿನ ವಿಳಂಬವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ಹೇಳಿದೆ.
ದ್ವೇಷ ಭಾಷಣವನ್ನು ಗಂಭೀರ ಅಪರಾಧವೆಂದು ಕರೆದಿದೆ. ಇದು ದೇಶದ ಜಾತ್ಯತೀತ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
