Tuesday, September 26, 2023

ಬಂಟ್ವಾಳ: ಗಣೇಶೋತ್ಸವ ಮೆರವಣಿಗೆ ವೇಳೆ ಬ್ಯಾನರ್ ಹರಿದ ಕಿಡಿಗೇಡಿಗಳು

ಬಂಟ್ವಾಳ: ಗಣೇಶೋತ್ಸವ ಮೆರವಣಿಗೆ ವೇಳೆ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ನಡೆದಿದೆ. ಸಜೀಪಮೂಡದ ಕಂದೂರಿನಲ್ಲಿ ಗಣೇಶೋತ್ಸವ ಮೆರವಣಿಗೆ...
More

    Latest Posts

    ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ಆತ್ಮಹತ್ಯೆ

    ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಮಂಗಳೂರು ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂಬವರು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.

    ಉಳ್ಳಾಲ: ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು

    ಉಳ್ಳಾಲ: ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಕಾಸರಗೋಡು...

    ಬಂಟವಾಳದ ಬಂಟರ ಭವನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆದ ಐದನೇ ಪೂರ್ವಭಾವಿ ಸಭೆ

    ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳ ಕುರಿತ ಐದನೇ ಪೂರ್ವಭಾವಿ ಸಭೆಯು ದಿನಾಂಕ 24/09/2023 ರಂದು ಬಂಟವಾಳದ ಬಂಟರ ಭವನದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಎಲ್ಲಾ...

    ಕಾವೂರಿನ ಕುಮಾರಿ ಈಶಿಕ ಶರತ್ ಶೆಟ್ಟಿ ಮುಡಿಗೇರಿದ ಮಿಸ್ ಟೀನ್ ಕರ್ನಾಟಕ ಮೊದಲ ರನ್ನರ್ ಅಪ್ ಪ್ರಶಸ್ತಿ ಕಿರೀಟ

    ಮಂಗಳೂರು: ಬೆಂಗಳೂರಿನಲ್ಲಿ N B ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಮಿಸ್ಟರ್, ಮಿಸ್, ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ವಿಭಾಗದಲ್ಲಿ ಮಂಗಳೂರು ಕಾವೂರಿನ ಕುಮಾರಿ ಈಶಿಕಾ ಶರತ್...

    ಸೆ.20 ರಂದು ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 6ನೇ ವಾರ್ಷಿಕೋತ್ಸವ, ವಾಯ್ಸ್ ಆಫ್ ಟ್ರಸ್ಟಿನ ಉದ್ಘಾಟನೆ

    ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ದ.ಕ.ಜಿಲ್ಲೆಯ ಒಂದು ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿದೆ. ಕಳೆದ 6 ವರ್ಷಗಳಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಅವಶ್ಯಕತೆಯಿಂದ ಜೀವನ್ಮರಣದ ಮಧ್ಯೆ ಹೋರಾಟ ಮಾಡುತ್ತಿರುವವರಿಗೆ ರಕ್ತ ಒದಗಿಸಿ ಸಾವಿರಾರು ಮಂದಿಗೆ ಜೀವದಾನ ನೀಡಿ ಅನೇಕ ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.

    ಬರೇ ರಕ್ತದಾನ ಮಾತ್ರವಲ್ಲದೆ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಚಿಕಿತ್ಸೆಗೆ ಬೇಕಾಗುವ ಎಲ್ಲಾ ರೀತಿಯ ನೆರವನ್ನು ನೀಡುತ್ತಾ ಬಂದಿದೆ.

    ವಿಕಲ ಚೇತನರಿಗೆ ಬೇಕಾಗುವ ವೀಲ್ ಚೆಯರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಮುಂತಾದ ಪರಿಕರಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ.

    ಬಡ ಹೆಣ್ಣುಮಕ್ಕಳ ಮದುವೆಗೆ ಬೇಕಾಗುವ ಒಳ್ಳೆಯ ಗುಣಮಟ್ಟದ ಸೀರೆ, ಚೂಡಿದಾರ, ವಾಚು ಇತ್ಯಾದಿಗಳನ್ನು ನೀಡುತ್ತಾ ಬಡ ಹೆಣ್ಣುಮಕ್ಕಳ ತಂದೆ ತಾಯಂದಿರ ಸಂಕಷ್ಟಕ್ಕೆ ನೆರವಾಗುವ ಕೆಲಸವನ್ನು ಮಾಡುತ್ತಾ ಬಂದಿದೆ.

    ಆರ್ಥಿಕವಾಗಿ ಹಿಂದುಳಿದವರಿಗೆ ವಾಯ್ಸ್ ಬ್ಲಡ್ ಡೋನರ್ಸ್ ನಿರಂತರವಾಗಿ ಸಹಾಯ ಮಾಡುತ್ತಾ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಆದುದರಿಂದ ನಮ್ಮ ಸಮಾಜ ಸೇವಾ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ನೀಡುವ ಉದ್ದೇಶದಿಂದ ವಾಯ್ಸ್ ಆಫ್ ಟ್ರಸ್ಟ್ ಎಂಬ ಹೆಸರಿನಲ್ಲಿ ನಮ್ಮ ಸಹಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಇದರ ಮೂಲಕ ಬಡಜನರ ಸೇವೆಯನ್ನು ಬಹಳ ಪರಿಣಾಮಕಾರಿಯಾಗಿ ಮಾಡಬೇಕು, ಹಸಿದವರ ಹೊಟ್ಟೆ ತಣಿಸುವ ಕೆಲಸ, ಅಶಕ್ತ ಅನಾರೋಗ್ಯ ಪೀಡಿತರಿಗೆ ನಮ್ಮ ಕೈಯ್ಯಲ್ಲಾದ ನೆರವು ನೀಡಬೇಕು, ಬಡ ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಪುಣ್ಯ ಕಾರ್ಯ ಮಾಡಬೇಕು ಎಂಬ ಹತ್ತು ಹಲವಾರು ಕನಸುಗಳನ್ನು ಹೊತ್ತುಕೊಂಡು ಮುಂದೆ ಹೆಜ್ಜೆಯನ್ನು ಇಟ್ಟಿದ್ದೇವೆ. ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ, ಕೊಡುಗೈ ದಾನಿ, ಸಮಾಜ ಮುಖಿ ಚಿಂತಕ, ಉತ್ಸಾಹಿ ಯುವ ತರುಣ, ಉತ್ತಮ ಸಮಾಜ ಸೇವಕ ಝಹೀರ್ ಅಬ್ಬಾಸ್ ರವರನ್ನು ಆಯ್ಕೆ ಮಾಡಲಾಗಿದೆ.

    ಝಹೀರ್ ಅಬ್ಬಾಸ್ ರವರು ಬಡವರ ಬಗ್ಗೆ ಕನಿಕರ ಉಳ್ಳ ಓರ್ವ ಪ್ರಾಮಾಣಿಕ ಹಾಗೂ ಯಾವುದೇ ಕೆಲಸಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವ ಸಮರ್ಥ ವ್ಯಕ್ತಿಯಾಗಿದ್ದಾರೆ. ಈಗಾಗಲೇ ವಾಯ್ಸ್ ಆಫ್ ಬ್ಲಡ್ ಡೋನರ್ಸ್ನ ಸಂಚಾಲಕರಾಗಿದ್ದುಕೊಂಡು ತನ್ನ ಸ್ವಂತ ಖರ್ಚಿನಿಂದ ಅದೆಷ್ಟೋ ಬಡ ಹೆಣ್ಣು ಮಕ್ಕಳ ಮದುವೆಗೆ ಬೇಕಾಗುವ ಉಡುಗೆ ತೊಡುಗೆ ಸಹಿತ ವಿವಿಧ ಸಾಮಾಗ್ರಿ, ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸದಲ್ಲಿ ಮುಂದಿರುವ ಬಡ ವಿದ್ಯಾರ್ಥಿಯಾಗಳಿಗೆ ಹಾಫಿಳ್ ಮತ್ತು ಉನ್ನತ ಶಿಕ್ಷಣಕ್ಕೆ ನೆರವು, ಅಶಕ್ತ ಅನಾರೋಗ್ಯ ಪೀಡಿತರಿಗೆ ಸಹಾಯ, ವಿಕಲ ಚೇತನರಿಗೆ ವೀಲ್ ಚೆಯರ್, ವಾಕಿಂಗ್ ಸ್ಟಿಕ್ ಮುಂತಾದ ಪರಿಕರಗಳ ಕೊಡುಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆಕಟ್ಟಲು ನೆರವು, ಬಡ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಹೊಲಿಗೆಯಂತ್ರ ವಿತರಣೆ, ಕೊರೋನಾ ಕಾಲದಲ್ಲಿ ಹಸಿದವರ ಹೊಟ್ಟೆ ತಣಿಸಲು ಬೇಕಾಗುವ ಸಮಗ್ರ ಆಹಾರ ಕಿಟ್ ವಿತರಣೆ, ಹೀಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ಸಮಾಜ ಸೇವೆಯ ಎಲ್ಲ ರಂಗಗಳಲ್ಲೂ ವ್ಯಯಕ್ತಿಕವಾಗಿ ಬಹಳಷ್ಟು ಕೊಡುಗೆಯನ್ನು ನೀಡಿದವರಾಗಿದ್ದಾರೆ. ಆದುದರಿಂದಲೇ ವಾಯ್ಸ್ ಆಫ್ ಟ್ರಸ್ಟಿಗೆ ಓರ್ವ ಸೂಕ್ತ ವ್ಯಕ್ತಿಯನ್ನು ನಾವು ಅಧ್ಯಕ್ಷ ಸ್ಥಾನಕ್ಕೆ ಆರಿಸಿದ್ದೇವೆ.

    ಇವರ ಪದಗ್ರಹಣ ಸಮಾರಂಭ ಇದೇ ಬರುವ ದಿನಾಂಕ: 20-09-2023 ರಂದು ಮಂಗಳೂರು ರಾವ್ & ರಾವ್ ಸರ್ಕಲ್ ಬಳಿಯಿರುವ ಸಿಟಿ ಟವರ್ ನ ಆವರಣದಲ್ಲಿ ನೆರವೇರಲಿದೆ.

    ಆ ದಿನ ಅನ್ನದಾನ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವಿಕಲ ಚೇತನರಿಗೆ ವೀಲ್ ಚೆಯರ್ ವಾಕರ್, ವಾಕಿಂಗ್ ಸ್ಟಿಕ್, ವಾಟರ್ ಬೆಡ್ ಮುಂತಾದ ಪರಿಕರಗಳ ವಿತರಣೆ

    ಒಂದು ಬಡ ಹೆಣ್ಣಿನ ಮದುವೆಯ ಸಂಪೂರ್ಣ ಖರ್ಚು ವೆಚ್ಚ ನೀಡುವಿಕೆ ಅಲ್ಲದೆ ಅದೇ ದಿನ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 6ನೇ ವಾರ್ಷಿಕೋತ್ಸವ ವಾಯ್ಸ್ ಆಫ್ ಟ್ರಸ್ಟಿನ ಉದ್ಘಾಟನೆ ನೆರವೇರಲಿದೆ.

    Latest Posts

    ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಅವಿವಾಹಿತ ಆತ್ಮಹತ್ಯೆ

    ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಮಂಗಳೂರು ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂಬವರು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ.

    ಉಳ್ಳಾಲ: ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು

    ಉಳ್ಳಾಲ: ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ. ಕಾಸರಗೋಡು...

    ಬಂಟವಾಳದ ಬಂಟರ ಭವನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ನಡೆದ ಐದನೇ ಪೂರ್ವಭಾವಿ ಸಭೆ

    ವಿಶ್ವ ಬಂಟರ ಸಮ್ಮೇಳನದ ಕಾರ್ಯಕ್ರಮಗಳ ಕುರಿತ ಐದನೇ ಪೂರ್ವಭಾವಿ ಸಭೆಯು ದಿನಾಂಕ 24/09/2023 ರಂದು ಬಂಟವಾಳದ ಬಂಟರ ಭವನದ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಿತು. ಸಭೆಯಲ್ಲಿ ಹಾಜರಿದ್ದ ಎಲ್ಲಾ...

    ಕಾವೂರಿನ ಕುಮಾರಿ ಈಶಿಕ ಶರತ್ ಶೆಟ್ಟಿ ಮುಡಿಗೇರಿದ ಮಿಸ್ ಟೀನ್ ಕರ್ನಾಟಕ ಮೊದಲ ರನ್ನರ್ ಅಪ್ ಪ್ರಶಸ್ತಿ ಕಿರೀಟ

    ಮಂಗಳೂರು: ಬೆಂಗಳೂರಿನಲ್ಲಿ N B ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಮಿಸ್ಟರ್, ಮಿಸ್, ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ವಿಭಾಗದಲ್ಲಿ ಮಂಗಳೂರು ಕಾವೂರಿನ ಕುಮಾರಿ ಈಶಿಕಾ ಶರತ್...

    Don't Miss

    ಇನ್ಮುಂದೆ ಸರ್ಕಾರಿ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿ ನಿಷೇಧ!

    ಬೆಂಗಳೂರು: ಸರ್ಕಾರಿ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿ ನಿಷೇಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್​) ಅವರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ...

    ಶೀಘ್ರವೇ ರಾಜ್ಯಾಧ್ಯಂತ ‘ಹುಕ್ಕಾಬಾರ್’ ನಿಷೇಧ – ಸಚಿವ ದಿನೇಶ್ ಗುಂಡೂರಾವ್

    ಬೆಂಗಳೂರು: ಜನರ ಆರೋಗ್ಯ ಮೇಲೆ ಪರಿಣಾಮ ಬೀರುವಂತ ಹುಕ್ಕಾಬಾರ್ ಗಳನ್ನು ರಾಜ್ಯಾಧ್ಯಂತ ನಿಷೇಧಿಸೋ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ನಿಷೇಧ ಆದೇಶವನ್ನು ಶೀಘ್ರವೇ ಜಾರಿಗೊಳಿಸೋದಾಗಿ ಆರೋಗ್ಯ ಸಚಿವ ದಿನೇಶ್...

    ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ವಿಕಲ ಚೇತನರಿಗೆ ವೀಲ್ ಚೆಯರ್, ವಾಕಿಂಗ್ ಸ್ಟಿಕ್ ಮುಂತಾದ ಪರಿಕರಗಳ ವಿತರಣೆ

    ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ವಾಯ್ಸ್ ಆಫ್ ಟ್ರಸ್ಟ್ ಮಂಗಳೂರು ಇದರ ಉದ್ಘಾಟನೆ ಹಾಗೂ ಇದರ ಅಧ್ಯಕ್ಷ ಝಹೀರ್ ಅಬ್ಬಾಸ್ ರವರ ಪದಗ್ರಹಣ...

    ಉಡುಪಿ: ಪತಿಗೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ- ಪ್ರಕರಣ ದಾಖಲು

    ಕಾಪು: ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ಪತ್ನಿಯೊಬ್ಬಳು ತನ್ನ ಪತಿಯ ಮೈಮೇಲೆ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರು ಎರಚಿದ್ದು ಪತಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ.

    ಮಂಗಳೂರು: ಕಾಟಿಪಳ್ಳದಲ್ಲಿ ಮಾದಕ ದ್ರವ್ಯ ವಿರುದ್ಧ ಜನಜಾಗೃತಿ ಕಾಲ್ನಡಿಗೆ ಜಾಥಾ ಮತ್ತು ಜನಜಾಗೃತಿ ಶಿಬಿರ

    ಮಂಗಳೂರು: ಮಾದಕದ್ರವ್ಯ ವಿರುದ್ಧ ಹೋರಾಟ ಸಮಿತಿ, ಕಾಟಿಪಳ್ಳ ಇದರ ವತಿಯಿಂದ ಪಣಂಬೂರು ಮುಸ್ಲಿಂ ಜಮಾತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ಮಾದಕ ದ್ರವ್ಯ ವಿರುದ್ಧ ಜನಜಾಗ್ರತಿ ಕಾಲ್ನಡಿಗೆ...