ಮಂಗಳೂರು: ಆಶಾಜ್ಯೋತಿ ದಿವ್ಯಾಂಗರು ಮತ್ತು ಅವರ ಹೆತ್ತವರ ವೇದಿಕೆ ಬಾಲಮಾರುತಿ ವ್ಯಾಯಾಮ ಮಂಡಲ ವಿಠೋಭ ದೇವಸ್ಥಾನ ರಸ್ತೆ ಮಂಗಳೂರು ಇದರ ವತಿಯಿಂದ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ -2023 ಎಂಬ ಕಾರ್ಯಕ್ರಮವು ಇಂದು (ಜ.15) ಕೆನರಾ ಹೆಣ್ಮಕ್ಕಳ ಪ್ರೌಢಶಾಲಾ ಮೈದಾನ ಡೊಂಗರಕೇರಿ ಮಂಗಳೂರಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅದಾನಿ ಗ್ರೂಪ್, ದಕ್ಷಿಣ ಭಾರತ ಇದರ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕರಾದ ಶ್ರೀ ಕಿಶೋರ್ ಆಳ್ವ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ಎ. ಕಿಶೋರ್ ಕುಮಾರ್ ಕೊಡ್ಗಿ ಮತ್ತು ಆಶಾಜ್ಯೊತಿ ಇದರ ಅದ್ಯಕ್ಷ ರು ಮತ್ತು ಸದಸ್ಯರಾದ ಡಾ.ಮುರಲೀಧರ್ ಹಾಗೂ ವಿಶ್ವಸ್ಥರು, ಸೇವಾ ಭಾರತಿ (ರಿ.) ಮಂಗಳೂರು ಉಪಸ್ಥಿತರಿದ್ದರು.

