ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ಸಭೆಯು ದಿನಾಂಕ 16-07-2023 ರಂದು ಕಿದಿಯೂರು ಹೋಟೆಲ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ಅನ್ಯಾಯ ಮತ್ತು ಮಹಿಳಾ ದೌರ್ಜನ್ಯ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಉಡುಪಿಯಲ್ಲಿ ಯೋಗಿಶ್ ಶೆಟ್ಟಿ ಜಪ್ಪು ಕರೆ ನೀಡಿದರು.
. ಮುಖ್ಯ ಅತಿಥಿಯಾಗಿ ಸಮಾಜ ಸೇವಕರಾದ ಶ್ರೀ. ಫ್ರಾಂಕಿ ಡಿಸೋಜಾ ಕೊಳಲಗಿರಿ ರವರು ಭಾಗವಹಿಸಿದ್ದರು. ಗೌರವ ಅಧ್ಯಕ್ಷರಾದ ರವಿ ಆಚಾರ್ ಅಧ್ಯಕ್ಷರಾದ ಕೃಷ್ಣಕುಮಾರ್ ರವರು ಪ್ರದಾನ ಕಾರ್ಯದರ್ಶಿಯಾದ ಸುನಿಲ್ ಪೆರ್ನಾಂಡಿಸ್, ಸಲಹೆಗಾರರಾದ ಸುಧಾಕರ್ ಪೂಜಾರಿ, ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಗಣೇಶ್ ಮಲ್ಯ ಮಹಿಳಾ ಅಧ್ಯಕ್ಷರಾದ ಶೋಭಾ ಪಾಂಗಳ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ,ಸಮಾಜಿಕ ಜಾಲತಾಣ ಸಂಚಾಲಕ ರೋಶನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದಸಿ ನೇಮಕ ಪತ್ರವನ್ನು ನೀಡಲಾಯಿತು.