Saturday, July 27, 2024
spot_img
More

    Latest Posts

    ಚಂದ್ರಯಾನ – 3 : ಈ 4 ಹಂತಗಳನ್ನು ಪೂರೈಸಿದರೆ ವಿಕ್ರಮ್ ಸಾಫ್ಟ್​ ಲ್ಯಾಂಡಿಂಗ್ ಪಿಕ್ಸ್

    ಚಂದ್ರಯಾನ – 3 ಯಶಸ್ಸಿಗೆ ಇಡೀ ದೇಶವೇ ಕಾಯುತ್ತಿದೆ. ಇಂದು ಸಂಜೆ ಚಂದ್ರಯಾನ–3 ಕೊನೆಯ 15 ನಿಮಿಷ ಭಾರೀ ಕುತೂಹಲದಿಂದ ಕೂಡಿದೆ. ಕೊನೆಯ 15 ನಿಮಿಷಗಳಲ್ಲಿ ನಾಲ್ಕು ಹಂತಗಳನ್ನು ಇಸ್ರೋ ಪೂರ್ಣಗೊಳಿಸಲಿದೆ. ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ನ ನಾಲ್ಕು ಹಂತಗಳು ಹೀಗಿವೆ 1- ರಫ್ ಬ್ರೇಕಿಂಗ್ ಹಂತ 2- ಅಟಿಟ್ಯೂಡ್ ಹೋಲ್ಡ್ ಹಂತ 3- ಫೈನ್ ಬ್ರೇಕಿಂಗ್ ಹಂತ 4- ಟರ್ನಿನಲ್ ಡೀಸೆಂಟ್ ಹಂತ ರಫ್ ಬ್ರೇಕಿಂಗ್ ಹಂತದ ವಿವರ ಲ್ಯಾಂಡರ್ ಸ್ಪೀಡ್, ಎತ್ತರ ಇಳಿಕೆ ನಿಯೋಜಿತ ಸ್ಥಳದಲ್ಲಿ ಲ್ಯಾಂಡಿಂಗ್ ಎತ್ತರವನ್ನು 30 ಕಿಮೀ ಯಿಂದ 7.42 ಕಿಮೀ ಇಳಿಕೆ ಅಡ್ಡಲಾಗಿ ಸಾಗುತ್ತಿರುವ ಲ್ಯಾಂಡರ್ ವೇಗವನ್ನು ಪ್ರತಿ ಸೆಕೆಂಡಿಗೆ 1068 ಮೀಟರ್ ನಿಂದ 358 ಮೀಟರ್ ಗೆ ಇಳಿಕೆ ಲಂಬ ವೇಗವನ್ನು ಪ್ರತಿ ಸೆಕೆಂಡಿಗೆ 61 ಮೀಟರ್ ಗೆ ಹೆಚ್ಚಿಸಬೇಕು ಅಟಿಟ್ಯೂಡ್ ಹೋಲ್ಡ್ ಹಂತ ವಿಕ್ರಮ್ ಲ್ಯಾಂಡರ್ ಅನ್ನು ಅಡ್ಡ ಕೋನದಿಂದ ಲಂಬ‌ ಕೋನಕ್ಕೆ ತರಬೇಕು. ಈ ಹಂತದಲ್ಲಿ 3.48 ಕಿಮೀ ಸಾಗಬೇಕು. ಎತ್ತರವನ್ನು 7.42 ಕಿಮೀ ನಿಂದ 6.8 km ಗೆ ಇಳಿಸಬೇಕು ಫೈನ್ ಬ್ರೇಕಿಂಗ್ ಹಂತ ಲ್ಯಾಂಡರ್ ಲಂಬ ಕೋನದಲ್ಲಿ ಸಾಗಬೇಕು ಎತ್ತರವನ್ನು 6.8 ಕಿಮೀ ನಿಂದ 800-1000 ಮೀಟರ್ ಗೆ ಇಳಿಸಬೇಕು ಅಡ್ಡ ವೇಗವನ್ನು ಪ್ರತಿ ಸೆಕೆಂಡಿಗೆ 336 ಮೀಟರ್ ನಿಂದ 0 ಮೀಟರ್ ಗೆ ಇಳಿಸಬೇಕು.. ಲಂಬ ವೇಗವನ್ನು 59 ಮೀಟರ್ ನಿಂದ 2 ಮೀಟರ್ ಗೆ ಇಳಿಸಬೇಕು ಟರ್ಮಿನಲ್ ಡೀಸೆಂಟ್ ಹಂತ ಲ್ಯಾಂಡಿಂಗ್ ಜಾಗದ ಅಂತಿಮ ಪರಿಶೀಲನೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್ ಅನ್ನು ಪೂರ್ಣಗೊಳಿಸುವುದು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss