Tuesday, September 17, 2024
spot_img
More

    Latest Posts

    ಮಂಗಳೂರು: ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ

    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತುರ್ತಾಗಿ ಪೈಪ್ ಲೈನ್ ಕಾಮಗಾರಿ ನಡೆಯಲಿದೆ. ಹೀಗಾಗಿ ಮಂಗಳೂರು ನಗರದ ವಿವಿಧೆಡೆ ಭಾನುವಾರ ಡಿ .16 ರ ಮುಂಜಾನೆಯಿಂದ 24 ಗಂಟೆಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

    ತುಂಬೆ ಹೆಚ್ ಎಲ್ ಪಿ ಎಸ್ ರೇಚಕ ಸ್ಥಾವರದಿಂದ ಪಣಂಬೂರಿಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯೂ ಬಿಜೈ ಚರ್ಚ್ ರೋಡ್ ಬ್ರಿಡ್ಜ್ ಬಳಿ , ಕೂಳೂರು ಸೇತುವೆ ಬಳಿ, ಎಂ ಸಿ ಎಫ್ ಬಳಿ ನೀರು ಸೋರಿಕೆ ಉಂಟಾಗಿರುವ ಹಿನ್ನೆಲೆ ತುರ್ತಾಗಿ ದುರಸ್ತಿ ಕಾಮಗಾರಿಗೆ ಪಾಲಿಕೆಯು ಮುಂದಾಗಿದೆ.

    ಡಿ.೧೬ ರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಡಿ.೧೭ ರ ಶುಕ್ರವಾರ ಬೆಳಿಗ್ಗೆ 6 ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಸುರತ್ಕಲ್, ಪಣಂಬೂರು, ಕಾನ, ಬಾಳ, , ಕಾಟಿಪಳ್ಳ, ಮುಂಚೂರು, ಎನ್ ಐ ಟಿ ಕೆ , ಸಸಿಹಿತ್ಲು , ಕೂಳೂರು, ಕೊಟ್ಟಾರ ಮುಂತಾದೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss