Thursday, October 10, 2024
spot_img
More

    Latest Posts

    ಮಂಗಳೂರು : ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದರೆ ಕ್ರಮ- ಅನುಪಮ್‌ ಅಗರ್‌ವಾಲ್‌

    ಮಂಗಳೂರು : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಇರುವ ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿರುವ ಕೆಲವು ಯುನಿಸೆಕ್ಸ್‌ ಸೆಲೂನ್‌ಗಳು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಗರದ 14 ಸೆಲೂನ್‌ಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಸೆಲೂನ್‌ ಮಾಲಕರು ತಮ್ಮ ಕೆಲಸಗಾರರ ಬಗ್ಗೆ ಪೊಲೀಸ್‌ ದೃಢೀಕರಣ ಪಡೆಯಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಇಲ್ಲವಾದರಲ್ಲಿ ಕಾನೂನು ಪ್ರಕಾರ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss