ತುಳುನಾಡ ರಕ್ಷಣಾ ವೇದಿಕೆ ಉಡುಪಿ ಮಹಿಳಾ ಘಟಕದ ಸಭೆ ಮಹಿಳಾ ಘಟಕ ಅಧ್ಯಕ್ಷರಾದ ಶೋಭಾ ಪಾಂಗಳ ರವರ ನೇತೃತ್ವದಲ್ಲಿ ದಿನಾಂಕ 24-09-2023 ರಂದು ಉಡುಪಿ ಹೋಟೆಲ್ ನೈವೇದ್ಯ ದಲ್ಲಿ ಜರುಗಿತ್ತು.
ಈ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ,ಉಡುಪಿ ಜಿಲ್ಲಾ ವೀಕ್ಷಕ ಫ್ರಾಂಕಿ ಡಿಸೋಜಾ, ಸಲಹೆಗಾರ ಸುಧಾಕರ ಅಮಿನ್, ಉಪಾಧ್ಯಕ್ಷ ಜಯರಾಮ ಪೂಜಾರಿ, ಯುವ ಘಟಕ ಅಧ್ಯಕ್ಷ ರಾಹುಲ್ ಭಾಗವಹಿಸಿದರು. ಮಹಿಳಾ ಘಟಕ ವತಿಯಿಂದ ಮುಂದಿನ ಕಾರ್ಯ ಚಟುವಟಿಕೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು.
ಉಡುಪಿ ಘಟಕದ ನೂತನ ಪದಾಧಿಕಾರಿಗಳಾಗಿ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ಸುನೀತಾ ಸ್ಟೆಲಾ , ಕ್ರೀಡಾ ಕಾರ್ಯದರ್ಶಿ ಹೆಲನ್ ಡಿ’ಸೋಜಾ , ಕೋಶಾಧಿಕಾರಿ ಸುನಂದ ರವರು ನೇಮಕಗೊಂಡರು. ಆಯ್ಕೆಗೊಂಡ ಪದಾಧಿಕಾರಿಗಳಿಗೆ ಯೋಗಿಶ್ ಶೆಟ್ಟಿ ಜಪ್ಪು ರವರು ಸಾಲು ಹಾಕಿ ಗೌರವಿಸಿದರು. ಸಭೆಯಲ್ಲಿ ವಿಜಯಲಕ್ಷ್ಮಿ, ಗುಣವತಿ, ಶಾಂಭಾವಿ , ನಂದನ , ಗುಲಾಬಿ ,ಸುಮತಿ, ಲಕ್ಷ್ಮಿ , ರೇಣುಕಾ , ಮತ್ತಿತರರ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಯವರು ಕಾರ್ಯಕ್ರಮ ನಿರೂಪಣೆಗೈದರು.