ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಜನವರಿ 17 ಮತ್ತು 18ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿ ರುವುದರಿಂದ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ)ರ ಅನ್ವಯ ಈ ಕೆಳಕಂಡ ರಸ್ತೆಗಳಿಗೆ ಬದಲಿ ಮಾರ್ಗ ಹಾಗೂ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ದಂಡಾಧಿಕಾರಿ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಜನವರಿ 17ರಂದು ಸಂಜೆ 4 ಗಂಟೆಯಿಂದ ಮಂಗಳೂರಿನಿಂದ ಉಡುಪಿ ಮತ್ತು ಮಣಿಪಾಲ ಕಡೆಗೆ ಹೋಗುವ ಎಲ್ಲಾ ಖಾಸಗಿ ಬಸ್ಸುಗಳು ಸ್ವಾಗತಗೋಪುರ ರಸ್ತೆಯಲ್ಲಿ ಸಂಚಾರ ಮಾಡದೇ ರಾ.ಹೆ-66 ಮೂಲಕ ಕರಾವಳಿ ಜಂಕ್ಷನ್ -ಬನ್ನಂಜೆ- ಶಿರಿಬೀಡು-ಸಿಟಿ ಬಸ್ಸು ನಿಲ್ದಾಣ-ಐರೋಡಿಕರ್-ಸರ್ವಿಸ್ ಬಸ್ಸು ನಿಲ್ದಾಣ ತಲುಪಬೇಕು. ಅದೇ ರೀತಿ ಮಂಗಳೂರಿಗೆ ತೆರಳುವ ಬಸ್ಸುಗಳು ಸರ್ವಿಸ್ ಬಸ್‌ನಿಲ್ದಾಣದಿಂದ ಕಿದಿಯೂರು ಹೊಟೇಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ- ಕರಾವಳಿ ಜಂಕ್ಷನ್-ರಾ.ಹೆ 66 ಮೂಲಕ ಮಂಗಳೂರಿಗೆ ಸಂಚರಿಸಬೇಕು. ಜನವರಿ 17ರಂದು ಸಂಜೆ 4 ಗಂಟೆಯಿಂದ ಕುಂದಾಪುರ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಖಾಸಗಿ ಬಸ್ಸುಗಳು ಸಂತೆಕಟ್ಟೆ- ಅಂಬಾಗಿಲು- ನಿಟ್ಟೂರು- ಕರಾವಳಿ ಜಂಕ್ಷನ್- ಬನ್ನಂಜೆ- ಶಿರಿಬೀಡು- ಸಿಟಿ ಬಸ್ಸು ನಿಲ್ದಾಣ- ಐರೋಡಿ ಮೂಲಕ ಸರ್ವಿಸ್ ಬಸ್ಸು ನಿಲ್ದಾಣ ತಲುಪಬೇಕು. ಅಲ್ಲಿಂದ ಕಿದಿಯೂರು ಹೋಟೆಲ್ ಮೂಲಕ ಕೆಳಗೆ ಇಳಿದು ಶಿರಿಬೀಡು- ಬನ್ನಂಜೆ -ಕರಾವಳಿ ಜಂಕ್ಷನ್ -ರಾಷ್ಟ್ರೀಯ ಹೆದ್ದಾರಿ 66 ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
Trending
- ಮಂಗಳೂರು : ದ.ಕ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ಆಯ್ಕೆ 🗞️
- ಶೀಘ್ರದಲ್ಲಿಯೇ ಮುಳಿಹಿತ್ಲು ರಸ್ತೆ ಅಗಲೀಕರಣ :- ಶಾಸಕ ಕಾಮತ್
- ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಹೊಸ ತಿರುವು — ಉದ್ಯಮಿ ರೋಶನ್ ಸಲ್ದಾನಾ ಅವರ 2.85 ಕೋಟಿ ರೂ. ಆಸ್ತಿ ಇಡಿ ಮುಟ್ಟುಗೋಲು
- ಖ್ಯಾತ ಉದ್ಯಮಿ ತಿರುವೈಲು ಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಹಾಗೂ ಯುವ ಉದ್ಯಮಿ ಅಭಿಷೇಕ್ ಆಳ್ವ ಶಾಂಭವಿ ನದಿಗೆ ಹಾರಿ ಆತ್ಮಹತ್ಯೆ
- “ ಸಹಕಾರ ಸಪ್ತಾಹ” ಅಂಗವಾಗಿ ತೌಳವ ಸಹಕಾರ ಮಾಣಿಕ್ಯ ಪ್ರಶಸ್ತಿ” ಹಾಗೂ “ತೌಳವ ಸಹಕಾರ ರತ್ನ ಪ್ರಶಸ್ತಿ” ಗೆ ಆರ್ಜಿ ಆಹ್ವಾನ
- ಇ-ಖಾತಾ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಹೈರಾಣು:- ಶಾಸಕ ಕಾಮತ್ ಆಕ್ರೋಶ
- ಐಕ್ಯಂ ವಿಶೇಷ ಮಕ್ಕಳ ಶಾಲೆಯಲ್ಲಿ ದೀಪಾವಳಿ ಆಚರಣೆ
- ಉಮ್ರಾ ಯಾತ್ರೆಗೆ ತೆರಳಿದ ಜರ್ಗುಮ್ ಫೌಂಡೇಶನ್ ಸದಸ್ಯರಿಗೆ ಸನ್ಮಾನ
