Thursday, September 19, 2024
spot_img
More

    Latest Posts

    ಉಡುಪಿ: ಗಾಂಜಾ ಸೇವೆನೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

    ಉಡುಪಿ: ಗಾಂಜಾ ಸೇವೆನೆ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಸೆನ್‌ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸಾಂದರ್ಭಿಕ ಚಿತ್ರಬಂಧಿತರನ್ನು ನಿಟ್ಟೂರು ಬಸ್‌ ನಿಲ್ದಾಣದ ಬಳಿ ಉತ್ತರ ಪ್ರದೇಶದ ಮೂಲದ ರಿತಿಕ್‌‌ ಕುಮಾರ್‌ ಮೌರ್ಯ (18) ಹಾಗೂ ಸಿಟಿ ಬಸ್‌ ನಿಲ್ದಾಣದ ಬಳಿ ಬ್ರಹ್ಮಾವರದ ಜಗದೀಶ್‌ ಪೂಜಾರಿ (45) ಎಂದು ಗುರುತಿಸಲಾಗಿದೆ.

    ನಿಟ್ಟೂರು ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಸಿಟಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ರಿತಿಕ್ ಕುಮಾರ್ ಹಾಗೂ ಅನ್ನು ಜಗದೀಶ್‌ ಪೂಜಾರಿ ಅನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಠಾಣೆಗೆ ಕರೆತಂದು ಮೆಡಿಕಲ್ ತಪಾಸಣೆಗೊಳಪಡಿಸಿದ್ದಾರೆ. ಫಾರೆನ್ಸಿಕ್ ವಿಭಾಗದಿಂದ ಬಂದ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss