ಉಡುಪಿಯಲ್ಲಿ ಮಹಿಷಾ ದಸರಾಕ್ಕೆ ನಿರ್ಬಂಧ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಡುಪಿ ಎಸ್‌ಪಿ ಡಾ.ಅರುಣ್, ಮಹಿಷಾ ದಸರಾ ಪರ ವಿರುದ್ಧ ಮೆರವಣಿಗೆ, ಧರಣಿ, ಸತ್ಯಾಗ್ರಹ, ಪೋಸ್ಟರ್ ಹಾಕುವಂತಿಲ್ಲ. ಹೊರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು 35 ಕೆ ಪಿ ಆಕ್ಟ್ ಪ್ರಕಾರ ಆದೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಹಿಷಾಸುರ ದಸರಾ ಹೊರಾಂಗಣದಲ್ಲಿ ಆಚರಣೆ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ನಾವು ಸೂಕ್ತ ಪೊಲೀಸ್ ಭದ್ರತೆ ಮಾಡಿದ್ದೇವೆ. ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿಯ ಅಗತ್ಯವಿಲ್ಲ. ಆದರೆ ಒಳಾಂಗಣದಲ್ಲಿ ಕಾಯ್ದೆ ಉಲ್ಲಂಘನೆಯಾದರೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದ್ದಾರೆ.
©2021 Tulunada Surya | Developed by CuriousLabs