Friday, December 1, 2023

ವಿಟ್ಲ: ಮಹಿಳೆಗೆ ಚಾಕು ತೋರಿಸಿ ಚಿನ್ನ ಕಳ್ಳತನಕ್ಕೆ ಯತ್ನಿಸಿ ಪರಾರಿ

ವಿಟ್ಲ: ಕುಳ ಗ್ರಾಮದ ನೀರಪಳಿಕೆಯಲ್ಲಿ ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ಯತ್ನಿಸಿದ ಘಟನೆ ನಡೆದಿದೆ. ನೀರಪಳಿಕೆ ಮಹಮ್ಮದ್ ಕುಂಞ ಅವರ ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ...
More

    Latest Posts

    ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

    ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

    ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

    ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

    ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

    ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

    Bank Holidays : ಡಿಸೆಂಬರ್ ನಲ್ಲಿ 18 ದಿನಗಳು ಬ್ಯಾಂಕ್ ಗಳಿಗೆ ರಜೆ : ಇಲ್ಲಿದೆ ಫುಲ್ ಲಿಸ್ಟ್

    ತಿಂಗಳ ಆರಂಭದ ಮೊದಲು, ಬ್ಯಾಂಕುಗಳ ರಜಾದಿನಗಳ ಪಟ್ಟಿ ಹೊರಬರುತ್ತದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದಕ್ಕೂ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿ ಈಗಾಗಲೇ ಬಂದಿದೆ.

    ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿಯವರ ಮನೆಯಲ್ಲಿ ಕಳ್ಳತನ-1kg ಚಿನ್ನ ಸಹಿತ ಇಬ್ಬರ ಬಂಧನ,ಇನ್ನಿಬ್ಬರು ಆರೋಪಗಳಿಗಾಗಿ ಶೋಧ

    ಮಂಗಳೂರು: ಮುಂಬೈ ಉದ್ಯಮಿ ಐಕಳ ಹರೀಶ್ ಶೆಟ್ಟಿ ಅವರ ಮನೆಯಿಂದ ಕಳವಾಗಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣದ ಪೈಕಿ 1kg 5 ಗ್ರಾಂ ಚಿನ್ನ ಮತ್ತು ಇಬ್ಬರು ಆರೋಪಿಗಳನ್ನು ಮಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

    2023ರ ಜನವರಿ 15ರಂದು ರಾತ್ರಿ ಕಿನ್ನಿಗೋಳಿಯ ಐಕಳದ ತಾಳಿಪ್ಪಾಡಿಯಲ್ಲಿರುವ ಹೆಸರಾಂತ ಉದ್ಯಮಿ ಹರೀಶ್ ಶೆಟ್ಟಿ ಅವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಮನೆಯ ಹೊರಗೆ ನಿಲ್ಲಿಸಿದ್ದ ಪಜೆರೋ ಕಾರನ್ನು ಕಳವುಗೈಯಲು ನಾಲ್ವರಿದ್ದ ತಂಡ ಹೊಕ್ಕಿತ್ತು. ಈ ವೇಳೆ, ಮನೆಯಲ್ಲಿ ಯಾರೂ ಇರಲಿಲ್ಲ. ಮದುವೆಯ ನಿಮಿತ್ತ ಹರೀಶ್ ಶೆಟ್ಟಿ ಕುಟುಂಬ ಊರಿಗೆ ಬಂದು ಮುಂಬೈಗೆ ಮರಳಿತ್ತು. ಕಾರಿನ ಕೀ ಪಡೆಯುವುದಕ್ಕಾಗಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದರು. ಮನೆಯ ಕಪಾಟು ಒಡೆದು ನೋಡಿದಾಗ, ಚಿನ್ನದ ಆಭರಣಗಳ ರಾಶಿಯೇ ಸಿಕ್ಕಿತ್ತು. ಆರೋಪಿಗಳು ಸದ್ದಿಲ್ಲದೆ, ಬಂದಿದ್ದ ಕಾರಿನಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. 

    ಕೃತ್ಯದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಸಿಸಿಬಿ ಪೊಲೀಸರು ನಾಲ್ವರ ಪೈಕಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ನಿವಾಸಿ ಗಣೇಶ್ ನಾಯ್ಕ್ (26) ಮತ್ತು ವಿರಾಜಪೇಟೆ ತಾಲೂಕಿನ ಸಿದ್ಧಾಪುರ ಗ್ರಾಮದ ನಿವಾಸಿ ರಂಜಿತ್ ಕೆ.ಆರ್.(26) ಬಂಧಿತರು. ಇವರನ್ನು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದು 1kg 5 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇದರ ಮೌಲ್ಯ ಸುಮಾರು 56.50 ಲಕ್ಷ ಆಗಬಹುದು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ತಿಳಿಸಿದ್ದಾರೆ. 

    ಕಳವು ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿಯವರು 2kg ಚಿನ್ನ ಕಳವು ಆಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದರು. ಇನ್ನಿಬ್ಬರು ಆರೋಪಿಗಳು ಕೇರಳದಲ್ಲಿ ಅವಿತುಕೊಂಡಿದ್ದಾರೆ ಎನ್ನಲಾಗುತ್ತಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ. 

    ಆರೋಪಿ ಗಣೇಶ್ ನಾಯ್ಕ್ ಮತ್ತು ಇತರ ಇಬ್ಬರು ಆರೋಪಿಗಳು ಮಂಗಳೂರಿನ ಕುಲಶೇಖರದ ಕೆಳರಾಯಿ ಚರ್ಚ್ ರಸ್ತೆಯಲ್ಲಿನ ಮನೆಯ ಬಾಗಿಲು ಒಡೆದು ಬೆಲೆಬಾಳುವ ವಸ್ತುಗಳನ್ನು ಕಳವು ನಡೆಸಿದ್ದರು. ಹಾಗೂ ಮಾರುತಿ ಬ್ರೀಜಾ ಕಾರನ್ನು ಕಳವು ಮಾಡಿದ್ದರು. ಪೊಲೀಸರ ತನಿಖೆಯಲ್ಲಿ ಈ ಕೃತ್ಯ ಕೂಡ ಪತ್ತೆಯಾಗಿದೆ. ಗಣೇಶ್ ನಾಯ್ಕ್ ವಿರುದ್ಧ ಈ ಹಿಂದೆ ಚಿಕ್ಕಮಗಳೂರು  ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆನಂತರ ಅಲ್ಲಿನ ಜೈಲಿನಲ್ಲಿದ್ದಾಗ ಇತರ ಆರೋಪಿಗಳ ಸಂಪರ್ಕ ಆಗಿತ್ತು. ಜೈಲಿನಿಂದ ಹೊರಬಂದ ಬಳಿಕ ಉದ್ಯಮಿ ಹರೀಶ್ ಶೆಟ್ಟಿ ಮನೆಯಿಂದ ಕಳವಿಗೆ ಸಂಚು ನಡೆಸಿದ್ದರು. ಹರೀಶ್ ಶೆಟ್ಟಿ ಮನೆಯಲ್ಲಿ ಕಾವಲುಗಾರ ಮನೆಯ ಹಿಂಭಾಗದ ಕಟ್ಟಡದಲ್ಲಿ ಮಲಗಿದ್ದರು. ಕಳ್ಳರು ನುಗ್ಗಿ ಚಿನ್ನಾಭರಣ ಹೊತ್ತೊಯ್ದಿದ್ದು ಅವರಿಗೆ ತಿಳಿಯಲೇ ಇಲ್ಲ.

    Latest Posts

    ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯ ಇಲಾಖೆ ನೌಕರ

    ಕುಂದಾಪುರ: ಅರಣ್ಯ ಇಲಾಖೆ ವಶದಲ್ಲಿದ್ದ ವಾಹನ ಬಿಡುಗಡೆಗೆ ಲಂಚ ಸ್ವೀಕರಿಸುತ್ತಿದ್ದ  ಕುಂದಾಪುರ ಅರಣ್ಯ ಇಲಾಖೆಯ ನೌಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ...

    ಡಿ.1 ರಂದು “ರಾಪಟ” ತುಳು ಸಿನೆಮಾ ಬಿಡುಗಡೆ

    ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1...

    ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತ ಲೋಕಾಯುಕ್ತ ಬಲೆಗೆ

    ಕುಂದಾಪುರ : ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿ ಲೋಕಾಯಕ್ತ...

    Bank Holidays : ಡಿಸೆಂಬರ್ ನಲ್ಲಿ 18 ದಿನಗಳು ಬ್ಯಾಂಕ್ ಗಳಿಗೆ ರಜೆ : ಇಲ್ಲಿದೆ ಫುಲ್ ಲಿಸ್ಟ್

    ತಿಂಗಳ ಆರಂಭದ ಮೊದಲು, ಬ್ಯಾಂಕುಗಳ ರಜಾದಿನಗಳ ಪಟ್ಟಿ ಹೊರಬರುತ್ತದೆ. ಈ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಪ್ರಾರಂಭವಾಗಲಿದೆ ಮತ್ತು ಅದಕ್ಕೂ ಮೊದಲು ಬ್ಯಾಂಕ್ ರಜಾದಿನಗಳ ಪಟ್ಟಿ ಈಗಾಗಲೇ ಬಂದಿದೆ.

    Don't Miss

    ಮಂಗಳೂರು : ಮರಣ ಪ್ರಮಾಣ ದೃಢೀಕರಣಕ್ಕೆ 13 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ವಿಎ

    ಮಂಗಳೂರು : ಅಜ್ಜನ ಮರಣ ಪ್ರಮಾಣ ಪತ್ರದ ದೃಢೀಕರಣಕ್ಕೆ 13 ಸಾವಿರ ಲಂಚ ಕೇಳಿದ ಚೇಳ್ಯಾರು ಗ್ರಾಮದ ವಿಎ ಶ್ರೀ ವಿಜಿತ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ...

    ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ

    ಮಂಗಳೂರು: ಎಮ್ಮೆಕೆರೆ ಕ್ರೀಡಾಂಗಣದ ಅಭಿವೃದ್ಧಿಗೆ ಶಂಕು ಸ್ಥಾಪನೆ ಬೆಳಗ್ಗೆ 11 ಗಂಟೆಗೆ ಎಮ್ಮೆಕೆರೆ ಮೈದಾನದಲ್ಲಿ ಜನ ಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ನಡೆದಿದೆ.

    ಬೆಳ್ತಂಗಡಿ: ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ – ಸವಾರ ಸಾವು

    ಬೆಳ್ತಂಗಡಿ: ಬೈಕ್ ನ ಸೈಡ್ ಸ್ಟ್ಯಾಂಡ್ ತೆಗೆಯದೆ ಬೈಕ್ ಚಲಾಯಿಸಿದ ಪರಿಣಾಮ ಬೈಕ್ ನಿಯಂತ್ರಣ ಡಿವೈಡರ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನಪ್ಪಿದ ಘಟನೆ ಬೆಳ್ತಂಗಡಿಯ ಉಜಿರೆಯಲ್ಲಿ ನಡೆದಿದ್ದು,...

    ಯಕ್ಷಾಂಗಣ ಸಪ್ತಾಹದಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ

    ಮಂಗಳೂರು: 'ಸಾಧನ ಶೀಲ ಕಲಾವಿದರ ಹೆಸರಿನೊಂದಿಗೆ ಅವರ ಮನೆತನದ ಅಥವಾ ಊರಿನ ಹೆಸರು ಸೇರಿಕೊಂಡಿರುತ್ತದೆ. ಇದು ಅಂಥವರ ಸಮಗ್ರ ಕುಟುಂಬಕ್ಕೆ ಸಲ್ಲುವ ಗೌರವ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟರು ಈ ನಿಟ್ಟಿನಲ್ಲಿ...

    ಹಿರಿಯ ಕಲಾವಿದ ರಂಗ ನಿರ್ದೇಶಕ ತಮ್ಮಲಕ್ಷ್ಮಣ ಅವರಿಗೆ ತುಳುನಾಟಕ ಬ್ರಹ್ಮ ರಾಮ ಕಿರೋಡಿಯನ್ ಸಂಸ್ಮರಣೆ

    ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ದಿನಾಂಕ 25-11-2023ರ ಶನಿವಾರ ಸಂಜೆ 5 ಗಂಟೆ ಸಮಯದಲ್ಲಿ ಜರಗುವ ಯಕ್ಷಾಂಗಣ ಮಂಗಳೂರು’ ಇವರ ಸರಣಿ ಸಂಸ್ಕರಣ ಸಮಾರಂಭದಲ್ಲಿ ತುಳು...