ಉಡುಪಿ: ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕದ ಉಡುಪಿ ಜಿಲ್ಲಾ ಸಭೆಯು ದಿನಾಂಕ 17-11-2023 ರಂದು ಶುಕ್ರವಾರ 2 ಗಂಟೆಗೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಕೇಂದ್ರೀಯ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆ ಉದ್ಘಾಟಿಸಿ ಮಾತನಾಡುತ್ತಾ ವೈದ್ಯರು ಯಾವುದೇ ಆತಂಕ ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವ ವಾತಾವರಣವನ್ನು ಸಮಾಜ ನಿರ್ಮಿಸಬೇಕು ಎಂದರು.

ನೂತನ ಜಿಲ್ಲಾಧ್ಯಕ್ಷರಾಗಿ ಡಾ. ರವೀಂದ್ರ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಡಾ. ಎನ್ ಟಿ ಅಂಚನ್, ಡಾ. ರಾಜೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಪ್ರಜೀತ್ ನಂಬಿಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಡಾ. ಸಂದೀಪ್ ಸಾಲಿಯಾನ್, ಜೊತೆ ಕಾರ್ಯದರ್ಶಿಯಾಗಿ ಡಾ. ಜೈ ಮೋಹನ್ ನಂಬಿಯಾರ್, ಡಾಕ್ಟರ್ ಸುದರ್ಶನ್ ಕಾರ್ಯಕಾರಿ ಸದಸ್ಯರುಗಳಾಗಿ ಡಾ. ಗಣೇಶ್ ಶೆಟ್ಟಿ , ಡಾ. ಪೌರವ್ ಶೆಟ್ಟಿ, ಸಂದೀಪ್ ಶೆಟ್ಟಿ , ಡಾ.ಶ್ರೇಯಸ್ ರವರನ್ನು ಆಯ್ಕೆ ಮಾಡಿ, ಶಾಲು ಹೊದಿಸಿ, ಹೂ ನೀಡಿ ಗೌರವಿಸಿದರು.


ನೂತನ ಅದ್ಯಕ್ಷರಾಗಿ ಆಯ್ಕೆಯಾಗಿ ರವೀಂದ್ರರವರು ಮತ್ತು ಉಪಾಧ್ಯಕ್ಷ. ಡಾ. ಎನ್.ಟಿ. ಅಂಚನ್ ರವರು ವೈದ್ಯರ ಸಮಸ್ಯೆ ನಿವಾರಣೆಗೆ ಬೆಂಬಲ ನೀಡಿ ದೈರ್ಯ ತುಂಬಿದ ಯೋಗಿಶ್ ಶೆಟ್ಟಿ ಜಪ್ಪುರವರ ಸೇವೆ ಶ್ಲಾಘನೀಯ ಎಂದರು.
ಸಭೆಯಲ್ಲಿ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ,ಉಡುಪಿ ಜಿಲ್ಲಾ ವೀಕ್ಷಕರಾದ ಪ್ರಾಂಕಿ ಡಿಸೋಜ, ತಾಲೂಕು ಗೌರವ ಅದ್ಯಕ್ಷ ಕೆ.ರವಿ ಆಚಾರ್ಯ, ತಾಲೂಕು ಅದ್ಯಕ್ಷ ಕೃಷ್ಣ ಕುಮಾರ್, ಉಪಾಧ್ಯಕ್ಷ ಜಯರಾಮ ಪೂಜಾರಿ, ಉಡುಪಿ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜಾ, ಉಡುಪಿ ತಾಲೂಕು ಮಹಿಳಾ ಘಟಕ ಅದ್ಯಕ್ಷೆ ಶೋಭಾ ಪಾಂಗಳಾ, ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮುಖಂಡರುಗಳಾದ
ಸುನಂದ, ಗುಣವತಿ ,ಗುಲಾಬಿ, ಪ್ರೀತಮ್ , ಹೇಮಾ, ನಿರ್ಮಲ ಮೆಂಡನ್ ,ಸೌಮ್ಯ ,ಯು ಭಾಸ್ಕರ್ ರಾವ್ ಸುಕನ್ಯಾ ಸಾಧನ ಮೋಹಿನಿ , ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.







