Thursday, March 28, 2024
spot_img
More

    Latest Posts

    ಡಿಜಿಟಲ್ ಮಾದ್ಯಮದಲ್ಲಿ ತುಲು ಗೇನಸಿರಿ ಲಿಪ್ಯಾಂತರ ಬಿಡುಗಡೆಗೊಳಿಸಿದ ಕಾಸರಗೋಡು ಜಿಲ್ಲಾಧಿಕಾರಿ

    ಜೈ ತುಲುನಾಡ್ (ರಿ.) ಸಂಘಟನೆಯು,ತುಲು ಭಾಷೆ ಸಂಸ್ಕೃತಿ ಅಚಾರ ವಿಚಾರಗಳ ಉಳಿವಿನ ಬಗ್ಗೆ ಶ್ರಮಿಸುತ್ತಿದ್ದು,ಡಿಜಿಟಲ್ ಮಾದ್ಯಮದಲ್ಲಿ ತುಲು ಲಿಪಿಯ ಬಳಕೆಯ ಹೆಚ್ಚಳಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

    ಸಂಘಟನೆಯು ಈ ಮೊದಲು ತುಲು ಬರವು, ತುಲು ಮಂದಾರ, ಕೊಪ್ಪರಿಗೆ ತುಲು ಡಿಕ್ಷನರಿ ಮುಂತಾದ ಯೋಜನೆಗಳನ್ನು ಸಮರ್ಪಿಸಿದ್ದು ಈಗ ಗೇನಸಿರಿ ಎಂಬ ಲಿಪ್ಯಂತರ ತಂತ್ರಾಂಶವನ್ನು ಕಾಸರಗೋಡು ಜಿಲ್ಲಾಧಿಕಾರಿ ಶ್ರೀಮತಿ  ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ  ಶ್ರೀ ಹರಿಕಾಂತ್ ಕಾಸ್ರೋಡ್ ಉಪಾಧ್ಯಕ್ಷರು, ಜೈ ತುಲುನಾಡ್ (ರಿ.) ಕೇಂದ್ರ ಸಮಿತಿ. ಉಮೇಶ್ ಸಾಲ್ಯಾನ್
     ಅಧ್ಯಕ್ಷರು ಕೇರಳ ತುಳು ಅಕಾಡೆಮಿ. ಕಾರ್ತಿಕ್ ಕೆ ಎನ್ ಕಾರ್ಯದರ್ಶಿ, ಜೈ ತುಲುನಾಡ್ (ರಿ.) ಕಾಸ್ರೋಡ್ ಘಟಕ. ಉತ್ತಮ ಯು ಕೋಶಾಧಿಕಾರಿ, ಜೈ‌ತುಲುನಾಡ್ (ರಿ.) ಕಾಸ್ರೋಡ್ ಘಟಕ.
     ಶ್ರೀನಿವಾಸ ಆಳ್ವ, ವಿನೋದ ಪ್ರಸಾದ್ ರೈ,
    ರಾಜಶ್ರೀ ಟಿ ರೈ ಪೆರ್ಲ, ಪ್ರಶಾಂತ್ ನಾಯ್ಕ್, ಕುಶಾಲಾಕ್ಷಿ ವಿ ಕಣ್ವತೀರ್ಥ, ಜ್ಞಾನೇಶ್ ದೇರಳಕಟ್ಟೆ, ಚಿರಶ್ರೀ ದೇರಳಕಟ್ಟೆ, ಕಿರಣ್ ತುಲುವೆ, ಪುರುಷೋತ್ತಮ ಎಂ ನಾಯ್ಕ್, ಸನ್ನಿಧಿ ಟಿ ರೈ ಪೆರ್ಲ. ಇನ್ನಿತರರು ಉಪಸ್ಥಿತರಿದ್ದರು.

    ಈ ತಂತ್ರಾಂಶವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ, ಯುನಿಕೋಡಿಗೆ ಕಳುಹಿಸಲಾದ ತುಲು ಲಿಪಿಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ತುಲು ಲಿಪಿಯ ವಿಶೇಷ ಅಕ್ಷರಗಳನ್ನೂ ಬಳಸಬಹುದು.

    ಈ ತಂತ್ರಾಂಶದ ಸಹಾಯದಿಂದ ಭಾರತದ ಅನೇಕ ಲಿಪಿಯಲ್ಲಿ ಬರೆಯುವ ಅಕ್ಷರಗಳನ್ನು ತುಲು ಲಿಪಿಗೆ ಸುಲಭವಾಗಿ ಬದಲಿಸಬಹುದು. ಮೊದಲ ಹಂತದಲ್ಲಿ ಈ ತಂತ್ರಾಂಶದಲ್ಲಿ ಕನ್ನಡ ಲಿಪಿಯಿಂದ ಮತ್ತು ಮಲಯಾಳಂ ಲಿಪಿಯಿಂದ ತುಲು ಲಿಪಿಗೆ ಬದಲಾಯಿಸಬಲ್ಲ ತಂತ್ರಾಂಶವನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಭಾರತದ ಇತರ ಲಿಪಿಗಳಿಂದ ತುಲು ಲಿಪಿಗೆ ಬದಲಾಯಿಸುವ ತಂತ್ರಾಂಶವನ್ನು ಅಳವಡಿಸಲಿದ್ದೇವೆ.

    ಈ ತಂತ್ರಾಂಶದ ಸಹಾಯದಿಂದ ತುಲು ಲಿಪಿಯಲ್ಲಿ ಪುಸ್ತಕ ಮುದ್ರಿಸಲು, ಪತ್ರಿಕೆ ಮುದ್ರಿಸಲು, ಆಮಂತ್ರಣ ಪತ್ರಿಕೆ ಮುದ್ರಿಸಲು, ಫ್ಲೆಕ್ಸ್ ಬ್ಯಾನರ್ ಮಾಡಲು, ಡಿಜಿಟಲ್ ಮಾಧ್ಯಮದಲ್ಲಿ ತುಲು ಲಿಪಿಯನ್ನು ಬಳಸಲು, ಶೈಕ್ಷಣಿಕವಾಗಿ ತುಲು ಲಿಪಿಯನ್ನು ಬಳಸಲು ತಂತ್ರಾಂಶವು ಸಹಾಯ ಮಾಡುತ್ತದೆ.

    ಈ ತಂತ್ರಾಂಶವನ್ನು ಜೈ ತುಲುನಾಡ್ (ರಿ.) ಸಂಘಟನೆಯ ಸದಸ್ಯರಾದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಜ್ಞಾನೇಶ್ ದೇರಳಕಟ್ಟೆ ಇವರು ತಯಾರಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss