Thursday, March 30, 2023

BREAKING NEWS : ರಾಜ್ಯದ 5 ಮತ್ತು 8 ನೇ ತರಗತಿಗೆ ‘ಪಬ್ಲಿಕ್ ಪರೀಕ್ಷೆ’ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : ರಾಜ್ಯದ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 5 ಮತ್ತು 8...
More

    Latest Posts

    ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

    ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

    ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

    ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

    ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

    ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

    ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

    ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ-ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ

    ಬಂಟ್ವಾಳ: ಕಳೆದ 41 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ತುಳು ಭಾಷೆಯ ಬೆಳವಣಿಗೆಗೆ ಪೂರಕವಾದ ತುಳು ನಾಟಕೋತ್ಸವ, ಆಟಿಡೊಂಜಿ ಕೂಟ, ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ತುಳು ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವ ಹಾಗೂ ತುಳು ನಾಟಕ ಮತ್ತು ಪ್ರತಿಭಾನ್ವಿತ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 5 ನೇ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯನ್ನು ಫೆಬ್ರವರಿ 4,2023 ರಿಂದ ಫೆಬ್ರವರಿ 10,2023 ನೇ ತಾರೀಕಿನವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದ್ದು, ಭಾಗವಹಿಸುವ ತಂಡಗಳ ನೊಂದಾವಣೆಗೆ ಕೃತಿಗಳನ್ನು ಆಹ್ವಾನಿಸುತ್ತಿರುವುದಾಗಿ ಸಂಘದ ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಅವರು ತಿಳಿಸಿದ್ದಾರೆ.
    ಅವರು ಬುಧವಾರ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಗೋಷ್ಠಿಯಲ್ಲಿ ಮಾತನಾಡಿದರು.ಸ್ಪರ್ಧೆಯಲ್ಲಿ 7 ನಾಟಕಗಳು ಭಾಗವಹಿಸಲು ಅವಕಾಶವಿದ್ದು, ಫೆ.11ರಂದು ಸಮಾರೋಪ ನಡೆಯಲಿದೆ. ಅಶ್ಲೀಲತೆಯ ಸೋಂಕಿಲ್ಲದ ತುಳು ಸಾಮಾಜಿಕ ನಾಟಕಕ್ಕೆ ಆದ್ಯತೆ. ಜಾತಿ,ಧರ್ಮ, ದೈವಾರಾಧನೆಗೆ ನಿಂದನೆಗಳು ನಿಷಿದ್ದವಾಗಿರುತ್ತದೆ. ನಾಟಕದ ಅವಽ ಕನಿಷ್ಟ 2.15 ಗಂಟೆಯಾಗಿದ್ದು, ಗರಿಷ್ಟ 2.45 ಗಂಟೆಗಳಿಗೆ ಮೀರಬಾರದು. ಅವಽ ತಲುಪದ ಹಾಗೂ ಅವಽ ಮೀರಿದ ನಾಟಕಗಳು ಸ್ಪರ್ಧೆಯ ಯಾವುದೇ ಬಹುಮಾನಗಳಿಗೆ ಪರಿಗಣಿಸಲ್ಪಡುವುದಿಲ್ಲ ಮತ್ತು ಠೇವಣಿಯನ್ನು ಹಿಂದುರುಗಿಸಲಾಗುವುದಿಲ್ಲ. ಯಾವುದೇ ವಿಭಾಗದಲ್ಲಿ ಒಬ್ಬರಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸುವ ಅವಕಾಶ. ಪರಿಮಿತ ಧ್ವನಿ ಮತ್ತು ಬೆಳಕಿನೊಂದಿಗೆ ಮೂರು ಪರದೆಗಳನ್ನು(ರಸ್ತೆ, ಮನೆ, ನೀಲಿ ಪರದೆ, ಅಂಕದ ಪರದೆ) ಒದಗಿಸಲಾಗುವುದು. ಹೆಚ್ಚಿನ ಅಗತ್ಯತೆಗಳನ್ನು ಸ್ಪರ್ಧಾ ತಂಡವೇ ಪೂರೈಸಿಕೊಳ್ಳಬೇಕು. ಸ್ಪರ್ಧಾ ತಂಡಕ್ಕೆ ಆಂಶಿಕ ಪ್ರಯಾಣ ಭತ್ಯೆಯನ್ನು ( ರೂ. 7 ಸಾವಿರ/-) ನೀಡಲಾಗುವುದು. ಸ್ಪರ್ಧೆಗೆ ಆಯ್ಕೆಗೊಂಡ ತಂಡವು ರೂ. 5 ಸಾವಿರ/- ವನ್ನು ಠೇವಣಿಯಾಗಿ ನೀಡತಕ್ಕದ್ದು, ಹಾಗೂ ನಾಟಕ ಸ್ಪರ್ಧಾ ಸಮಿತಿಯು ನೀಡುವ ದಿನಾಂಕದಂದು ತಮ್ಮ ನಾಟಕವನ್ನು ಪ್ರzರ್ಶಿಸಲು ಒಪ್ಪಿಕೊಳ್ಳತಕ್ಕದ್ದು. ಯಾವುದೇ ಬದಲಾವಣೆ ಅಥವಾ ನಾಟಕ ಹಿಂತೆಗೆದುಕೊಂಡಲ್ಲಿ ಠೇವಣಿ ಮೊತ್ತ ಹಿಂತಿರುಗಿಸಲಾಗುವುದಿಲ್ಲ. ಈಗಾಗಲೇ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡು ಬಹುಮಾನ ವಿಜೇತ ನಾಟಕಗಳಿಗೆ ಅವಕಾಶ ಇರುವುದಿಲ್ಲ ಎಂದು ಅವರು ವಿವರಿಸಿದರು.
    ಬಹುಮಾನಗಳ ವಿವರ: ಶ್ರೇಷ್ಠ ನಾಟಕ ಪ್ರಥಮ : 33ಸಾವಿರ ರೂ., ದ್ವಿತೀಯ : 22ಸಾವಿರ ರೂ. ,ತೃತೀಯ : 15ಸಾವಿರ ರೂ. , ಶ್ರೇಷ್ಠ ನಟ, ನಟಿ,ಹಾಸ್ಯ ನಟ,ನಟಿ,ಪೋಷಕ ನಟ, ನಟಿ,ಸಂಗೀತ, ನಿರ್ದೆಶನ,ರಂಗ ವಿನ್ಯಾಸ, ಪ್ರಸಾದನ, ಅತ್ಯುತ್ತಮ ಬೆಳಕು ಸಂಯೋಜನೆ, ಈ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು.ತೀರ್ಪುಗಾರರ ವಿಶೇಷ ಬಹುಮಾನವಿದೆ.
    ನಾಟಕ ಸ್ಪರ್ಧಾ ಸಮಿತಿಯ, ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಡಿ.೩೧ ರ ಮುಂಚಿತವಾಗಿ ಕೃತಿಗಳನ್ನು ಕಳುಹಿಸಬೇಕು. ಕೃತಿ ಕಳುಹಿಸಬೇಕಾದ ವಿಳಾಸ:
    ಅಧ್ಯಕ್ಷರು,
    ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ರಿ.ಪುಂಜಾಲಕಟ್ಟೆ
    ಪಿಲಾತಬೆಟ್ಟು ಗ್ರಾಮ, ಅಂಚೆ ಪುಂಜಾಲಕಟ್ಟೆ, ಬಂಟ್ವಾಳ ತಾ.
    ಅಥವಾ ಸುರಕ್ಷಾ ಮೆಡಿಕಲ್ಸ್
    ಅಂಚನ್ ಕಾಂಪ್ಲೆಕ್ಸ್, ಪುಂಜಾಲಕಟ್ಟೆ
    ಅಂಚೆ ಪುಂಜಾಲಕಟ್ಟೆ.
    ಸಂಪರ್ಕ: ಮೊ.ನಂ. : 9482096063, 9449189506, 9749324862
    ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಪದಾಧಿಕಾರಿಗಳಾದ ಮಂಜಪ್ಪ ಮೂಲ್ಯ, ಗಿರೀಶ್ ಮೂಲ್ಯ ಅನಿಲಡೆ, ಚಂದ್ರಶೇಖರ ಶೆಟ್ಟಿಗಾರ್, ದಿನಕರ ಶೆಟ್ಟಿ ಉಪಸ್ಥಿತರಿದ್ದರು.

    Latest Posts

    ಕಡಬ: ನಾಪತ್ತೆಯಾಗಿದ್ದ ವಿದ್ಯಾರ್ಥಿ ನದಿಯಲ್ಲಿ ಮೃತದೇಹ ಪತ್ತೆ..!

    ಕಡಬ: ಕುಮಾರಧಾರಾ ನದಿಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಕೋಡಿಂಬಾಳ ಗುಂಡಿಮಜಲ್ ನಿವಾಸಿ ಮಂಜುನಾಥ್ ಎಂಬವರ ಮಗ 10 ನೇ ತರಗತಿ ವಿದ್ಯಾರ್ಥಿ ಅದ್ವೈತ್ ಶೆಟ್ಟಿ (15).

    ಕಡಬ: ದೈವ ನರ್ತನದ ವೇಳೆ ಕುಸಿದು ಬಿದ್ದು ದೈವ ನರ್ತಕ ಸಾವು

    ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಮೃತಪಟ್ಟ ಘಟನೆ ಕಡಬ ಸಮೀಪದ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವ ನರ್ತಕ ಕಾಂತು ಅಜಿಲ ಮೂಲಂಗೀರಿ...

    ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮಹಿಳೆಗೆ ಬಸ್ ಡಿಕ್ಕಿ – ಮಹಿಳೆ ಸಾವು

    ಮಂಗಳೂರು: ಬೆಂದೂರ್ ವೆಲ್ ಸರ್ಕಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಬಡಿದಿದ್ದು ಮಹಿಳೆ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದು ಘಟನೆ ನಡೆದಿದೆ. ಬಸ್ ಪತ್ತೆ...

    ಕರ್ನಾಟಕ ವಿಧಾನಸಭೆ ಚುನಾವಣೆ : ಇದೇ ಮೊದಲ ಬಾರಿಗೆ ಪತ್ರಕರ್ತರಿಗೆ ಅಂಚೆ ಮತದಾನಕ್ಕೆ ಅವಕಾಶ

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಇದೇ ಮೊದಲ ಬಾರಿಗೆ ಕಾರ್ಯನಿರತ ಪತ್ರಕರ್ತರಿಗೆ ಅಂಚೆ ಮೂಲಕ ಮತದಾನ ಮಾಡಲು ಚುನಾವಣಾ...

    Don't Miss

    BIGG NEWS : ಕೇಂದ್ರ ಸಚಿವರ ಮಹತ್ವದ ಘೋಷಣೆ, 6 ತಿಂಗಳಲ್ಲಿ ‘ಟೋಲ್ ಪ್ಲಾಜಾ’ ಬಂದ್, ‘GPS’ ವ್ಯವಸ್ಥೆ ಜಾರಿ.!

    ನವದೆಹಲಿ : ನೀವು ಹೆದ್ದಾರಿಯಲ್ಲಿ ನಿಮ್ಮ ಕಾರಿನೊಂದಿಗೆ ಪ್ರಯಾಣಿಸಿದ್ರೆ, ಟೋಲ್ ಪ್ಲಾಜಾದಲ್ಲಿ ಕಳೆದ ಸಮಯವನ್ನ ನೀವು ಇಷ್ಟಪಡುವುದಿಲ್ಲ. ಟೋಲ್ ಪ್ಲಾಜಾದಲ್ಲಿ ತೆಗೆದುಕೊಳ್ಳುವ ಸರಾಸರಿ ಸಮಯವನ್ನ ಕಡಿಮೆ ಮಾಡಲು ಸರ್ಕಾರವು ನಿರಂತರವಾಗಿ...

    ಕುಂಪಲ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

    ಉಳ್ಳಾಲ: ಮೊಬೈಲ್ ಶೋರೂಂವೊಂದರಲ್ಲಿ ಕೆಲಸಕ್ಕಿದ್ದ ಕುಂಪಲ ಮೂರು ಕಟ್ಟೆ ನಿವಾಸಿ ಯುವಕನೊಬ್ಬ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಅಕ್ಷಯ್ (25) ಆತ್ಮಹತ್ಯೆ...

    ಸುಳ್ಯ: ಮನೆ ಕಾಮಗಾರಿ ವೇಳೆ ತಡೆಗೋಡೆ ಕುಸಿತ – ಮೂವರು ಕಾರ್ಮಿಕರ ಸಾವು

    ಸುಳ್ಯ : ತಡೆಗೋಡೆ ಕಾಮಗಾರಿ ಮೇಳೆ ಗುಡ್ಡದ ಮಣ್ಣು ಜರಿದು ಮೂವರು ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದ ಘಟನೆ ಸುಳ್ಯದ ಗಾಂಧಿನಗರ ಬಳಿ ನಡೆದಿದೆ. ಮೃತರನ್ನು ಸೋಮಶೇಖರ (45),...

    ಉಜ್ವಲ ಯೋಜನೆಯಡಿ 12 ಸಿಲಿಂಡರ್ ವಿತರಣೆ -200 ರೂ. ಸಬ್ಸಿಡಿ.!

    ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 12 ರೀಫಿಲ್‌ಗಳಿಗೆ ಪ್ರತಿ ಸಿಲಿಂಡರ್‌ಗೆ ರೂ 200 ಸಬ್ಸಿಡಿ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಪ್ರಧಾನ...

    5,8 ನೇ ತರಗತಿಗೆ ಬೋರ್ಡ್ ಪರೀಕ್ಷೆ : ಮತ್ತೆ ಮುಂದೂಡಲು ಹೈಕೋರ್ಟ್ ನಕಾರ

    ಬೆಂಗಳೂರು: ರಾಜ್ಯದ 5 ಮತ್ತು 8 ನೇ ತರಗತಿಗಳಿಗೆ ಮಾರ್ಚ್ 27 ರಿಂದ ನಡೆಯಲಿರುವ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ಮುಂದೂಡಬೇಕೆಂಬ ರಾಜ್ಯ ಖಾಸಗಿ ಅನುದಾನಿತ ರಹಿತ ಶಾಲೆಗಳ ಒಕ್ಕೂಟದ ಮನವಿಯನ್ನು...