Thursday, July 25, 2024
spot_img
More

    Latest Posts

    ಕಾಪು: ಲೀಲಾಧರ ಶೆಟ್ಟಿ ದಂಪತಿಗೆ ನುಡಿನಮನ

    ಕಾಪು: ಇತ್ತೀಚೆಗೆ ಅಗಲಿದ ದಿ| ಕೆ. ಲೀಲಾಧರ ಶೆಟ್ಟಿ ಮತ್ತು ದಿ| ವಸುಂಧರಾ ಶೆಟ್ಟಿ ಅವರಿಗೆ ಸಾರ್ವಜನಿಕ ನುಡಿನಮನ ಸಮರ್ಪಣೆ ಸಹಿತ ಶ್ರದ್ಧಾಂ ಜಲಿ ಸಭೆಯು ಸೋಮವಾರ ಕಾಪು ಬಂಟರ ಸಂಘದ ಅಂಬಾ ಮಹಾಬಲ ಶೆಟ್ಟಿ ಆವರಣದಲ್ಲಿ ನಡೆಯಿತು.

    ಉಡುಪಿ ಶ್ರೀ ಅನಂತೇಶ್ವರ ದೇವ ಸ್ಥಾನದ ಪ್ರಧಾನ ಅರ್ಚಕ ವೇ| ಮೂ| ವೇದವ್ಯಾಸ ಐತಾಳ ನುಡಿನಮನ ಸಲ್ಲಿಸಿ, ಮಗುವನ್ನೂ ಪ್ರೀತಿಯಿಂದ ಕರೆದು ಗೌರವದಿಂದ ಮಾತನಾಡಿಸುತ್ತಿದ್ದ ಲೀಲಾಧರ ಸರ್ವ ಜಾತಿ, ಮತ, ಧರ್ಮ ಪಂಥದವರಿಗೆ ಬೇಕಾದವರಾಗಿದ್ದರು.

    ಅವರ ಅಗಲುವಿಕೆಯನ್ನು ಅರಗಿಸಿ ಕೊಳ್ಳುವುದು ಕಷ್ಟ ಸಾಧ್ಯ, ನಾವೆಲ್ಲರೂ ಸೇರಿ ಅವರಿಗೆ ವಿಷ್ಣು ಸಾಯುಜ್ಯ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ ಎಂದು ಹೇಳಿದರು.

    ಲೀಲಣ್ಣನ ಕನಸುಗಳನ್ನು ಪೂರ್ಣಗೊಳಿಸೋಣ
    ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಮಾನವ ಜನ್ಮ ದೈವಚಿತ್ತದ ಕೊಡುಗೆಯಾಗಿದ್ದು ಇಲ್ಲಿ ಬದುಕಿದಷ್ಟು ದಿನ ಉತ್ತಮರಾಗಿ ಬದುಕಿ, ಜನರಿಗಾಗಿ ತಮ್ಮ ಜೀವನವನ್ನು ತೇಯ್ದ ಲೀಲಣ್ಣ ಇಚ್ಛಾಮರಣಿಯಾಗಿ ನಮ್ಮನ್ನು ಅಗಲಿ ರುವುದು ಅರಗಿಸಿಕೊಳ್ಳಲಾಗದ ಸತ್ಯ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಕನಸುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತುಕೊಳ್ಳೋಣ ಎಂದರು.

    ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಲೀಲಾಧರ ಅವರ ಎಲ್ಲ ಸೇವಾ ಕಾರ್ಯಗಳನ್ನು ಸಮಾಜ ಸ್ವೀಕರಿಸಿತ್ತು. ಅವರನ್ನು ಮತ್ತು ಅವರು ಮಾಡಿದ ಸೇವಾ ಕಾರ್ಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

    ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಸಮಾಜಕ್ಕಾಗಿ ಬದುಕಿದವರು ಲೀಲಣ್ಣ. ಹಲವರ ಬಾಳು ಬೆಳಗಿಸಿದ್ದ ಅವರ ಕನಸನ್ನು ನನಸಾಗಿಸಲು ನಾವೆಲ್ಲರೂ ಒಂದಾಗೋಣ ಎಂದರು.

    ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಲೀಲಾಧರ ಹತ್ತಾರು ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಮಂದಿಯ ಪ್ರೀತಿಗೆ ಪಾತ್ರರಾಗಿದ್ದರು. ಸಮಾಜ ದಲ್ಲಿ ನೊಂದವರ ಪಾಲಿನ ಭಾಗ್ಯ ದಾತರಾಗಿದ್ದರು ಎಂದರು.
    ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್‌ ರಶೀದ್‌ ಸಖಾಫಿ ಮಾತನಾಡಿ, ಸಂಘರ್ಷಮಯ ವಾತಾವರಣವನ್ನು ಶಾಂತಿಯ ಹೂದೋಟವನ್ನಾಗಿ ಪರಿ ವರ್ತಿಸುವಲ್ಲಿ ಲೀಲಣ್ಣನವರ ಕೊಡುಗೆ ಅಪಾರ ಎಂದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss