Wednesday, October 23, 2024
spot_img
More

    Latest Posts

    ಕಂಬಳ‌ ಇತಿಹಾಸಲ್ಲಿ ನೂತನ ಅಧ್ಯಾಯ: ಯುವತಿಯರಿಗೆ ತರಬೇತಿ‌ ನೀಡಲು ಅಕಾಡೆಮಿ ಸಿದ್ಧ

    ಮಂಗಳೂರು: ತುಳುನಾಡಿನ ಜಾನಪದೀಯ ಕ್ರೀಡೆ ಕಂಬಳ ದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ ಪ್ರತಿವಾದದಲ್ಲಿ ಕಂಬಳ ಗೆದ್ದಿದೆ. ಇದರಿಂದಾಗಿ ಕಂಬಳ ಆಯೋಜಕರು ಮತ್ತಷ್ಟು ಪುಳಕಿತರಾಗಿದ್ದಾರೆ. ಪ್ರಸಕ್ತ ವರ್ಷದ ಕಂಬಳ ಋತು ಮುಗಿದರೂ ಮುಂದಿನ ಬಾರಿ ಅದ್ಧೂರಿಯಾಗಿ ವಿಭಿನ್ನವಾಗಿ ಶಿಸ್ತು ಬಧ್ಧವಾಗಿ ಕಂಬಳ ನಡೆಸಲು ಕಂಬಳ ಸಮಿತಿ ಚಿಂತನೆ ಮಾಡಿದೆ.
    ಕಂಬಳ‌ ಇತಿಹಾಸಲ್ಲಿ ನೂತನ ಅಧ್ಯಾಯ ಬರೆಯಲು ಕಂಬಳ ಸಮತಿ ಮುಂದಾಗಿದೆ. ಮುಂದಿನ ಕಂಬಳ ಋತುವಿನಲ್ಲಿ ಕಂಬಳದ ಕೋಣಗಳನ್ನು ಓಡಿಸಲು ಮಹಿಳಾ ಓಟಗಾರರನ್ನು ಸಿದ್ಧಪಡಿಸಲು ಕಂಬಳ ಸಮಿತಿ ತೀರ್ಮಾನಿಸಿದೆ.
    ನವೆಂಬರ್ ನಿಂದ ಕಂಬಳದ ಋತು ಆರಂಭವಾಗಲಿದ್ದು, ಅದಕ್ಕೂ ಮುನ್ನ ಕಂಬಳದ ವಿವಿಧ ಪ್ರಕಾರಗಳ ಬಗ್ಗೆ ನಡೆಸುವ ಶಿಬಿರದಲ್ಲಿ ಆಸಕ್ತ ಮಹಿಳಾ ಓಟಗಾರರನ್ನು ಸೇರಿಸಲು ಕಂಬಳ ಸಮಿತಿ ಯೋಜನೆ ರೂಪಿಸಿದೆ.. ಮುಂದಿನ ಬಾರಿ ತರಬೇತಿ ಪಡೆದ ಕಂಬಳ ಕೋಣಗಳ ಮಹಿಳಾ ಓಟಗಾರ್ತಿಯರಿಗೆ ಪ್ರತ್ಯೇಕ ಕಂಬಳವನ್ನು ನಡೆಸಲು ಕಂಬಳ ಸಮಿತಿ ಯೋಚನೆ ಮಾಡಿದೆ.

    ಕಂಬಳದಲ್ಲಿ ಹೊಸ ತಂತ್ರಜ್ಞಾನ ಬಳಸಲು ಲೇಸರ್ ಭೀಮ್ ನೆಟ್ವರ್ಕ್ ನ್ನು ಸುಧಾರಿಸಿ ನಿಖರ ಫಲಿತಾಂಶ ನೀಡಲು ಕಂಬಳ ಸಮಿತಿಯು ಚಿಂತನೆ ಮಾಡಿದೆ. ಇದಕ್ಕಾಗಿ ಸಾಕಷ್ಟು ಹಣ ಬೇಕಾಗಿರುವುದರಿಂದ ದಾನಿಗಳ ನಿರೀಕ್ಷೆಯಲ್ಲಿ ಕಂಬಳ ಸಮಿತಿ ಇದೆ. ಫಲಿತಾಂಶ ವೇಗವಾಗಿ ಸಿಗುವ ಕಾರಣ 24 ಗಂಟೆಯೊಳಗೆ ಕಂಬಳ ಮುಗಿಯುವ ವಿಶ್ವಾಸ ಕಂಬಳ ಸಮಿತಿ ಹೊಂದಿದೆ.
    ಸರ್ಕಾರದ ವತಿಯಿಂದ ಪ್ರತಿ ಕಂಬಳಕ್ಕೆ 5 ಲಕ್ಷ ಪ್ರೋತ್ಸಾಹ ಧನ ಸಿಗುವುದರಿಂದ ಕಂಬಳವನ್ನ ಮತ್ತಷ್ಟು ವಿಭಿನ್ನವಾಗಿ ಮಾಡಲು ಕಾರ್ಯರೂಪಗಳನ್ನು ಕಂಬಳ ಸಮಿತಿ ಮಾಡಿದೆ. ಪ್ರತಿವರ್ಷ ಕಂಬಳ ಅಕಾಡೆಮಿ ನೀಡುವ ತರಬೇತಿ ಶಿಬಿರದಲ್ಲಿ ಈ ಬಾರಿ ಮಹಿಳೆಯರನ್ನು ಸೇರಿಸಲು ಅಕಾಡೆಮಿ ನಿರ್ಧರಿಸಿದೆ.
    ಪ್ರತಿಬಾರಿ ಆಗಸ್ಟ್ ತಿಂಗಳಲ್ಲಿ ಈ ತರಬೇತಿ ಶಿಬಿರ ನಡೆಯಲಿದ್ದು ಉತ್ಸಾಹಿ ತರುಣ ತರುಣಿಯರು ಭಾಗವಹಿಸು ನಿರೀಕ್ಷೆಗಳಿವೆ. ಈ ಬಾರಿ ಸುಮಾರು 15 ರಿಂದ 20 ಯುವತಿಯರು ಭಾಗವಹಿಸುವ ಸಾಧ್ಯತೆಗಳಿವೆ.ಈ ತರಬೇತಿ ಪಡೆದ ಕೆಲವರನ್ನು ಕಂಬಳ ಓಟಗಾರನ್ನಾಗಿ ಮತ್ತು ಕೆಲವರನ್ನು ಉದ್ಘೋಷಕರಾಗಿ. ಫ್ಲಾಗ್ ಹಿಡಿಯುವ ತರಬೇತಿ‌ ನೀಡಲು ಅಕಾಡೆಮಿ ಚಿಂತನೆ ಮಾಡಿದೆ.

    ಪ್ರತಿ ವರ್ಷ ನಡೆಯುವ ಅಕಾಡೆಮಿಯ ವಾರ್ಷಿಕ ಶಿಬಿರದಲ್ಲಿ ಉತ್ಸಾಹಿ ತರುಣರ ಭಾಗವಹಿಸಿ ಭವಿಷ್ಯದಲ್ಲಿ ಉತ್ತಮ ಕಂಬಳ ಓಟಗಾರರಾಗಿದ್ದಾರೆ. ಯುವತಿಯರು ಈ ಶಿಬಿರದ ಲಾಭವನ್ನು ಪಡೆಯುವ ನಿರೀಕ್ಷೆಗಳಿಗೆ ಅವರ ಉತ್ಸಾಹದ ಅನುಗುಣವಾಗಿ ತರಬೇತಿ ನೀಡಿ ಅವರ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಿ ಅವಕಾಶವನ್ನು ನೀಡಲಾಗುತ್ತದೆ.

    ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನ ಮನೆ, ‘ಪ್ರತಿ ಬಾರಿಯೂ ಕಂಬಳ ಶಿಸ್ತು ಬದ್ಧವಾಗಿ ಯೋಜನಾ ಬದ್ಧವಾಗಿ ನಡೆಯುತ್ತದೆ. ಮುಂದಿನ ಬಾರಿಯೂ ಅದೇ ಮಾದರಿಯಲ್ಲಿ ಕಂಬಳ ನಡೆಸಲು ತೀರ್ಮಾನಿಸಿದ್ದೇವೆ. ಆದರೆ ಈ ಬಾರಿ ಆಸಕ್ತ ಯುವತಿಯರಿಗೆ ತರಬೇತಿ ನೀಡಿ ಕಂಬಳ ಓಟದ ಓಟಗಾರ್ತಿರನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ತರಬೇತಿ ನೀಡಿದ ಬಳಿಕ ನಡೆಯುವ ವೈದ್ಯರ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಕಂಬಳ ಓಟಗಾರರನ್ನಾಗಿ ಮಾಡಲು ತೀರ್ಮಾನ ಮಾಡಿಸುತ್ತೇವೆ’ ಎಂದು ಹೇಳಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss