ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್ನಲ್ಲಿರುವ ಟಯರ್ ಅಂಗಡಿಯೊಂದಕ್ಕೆ ತಡ ರಾತ್ರಿ ಬೆಂಕಿ ತಗುಲಿ ಭಾರೀ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಟಯರ್, ಟ್ಯೂಬ್ ರಿಪೇರಿ ಮತ್ತು ಮಾರಾಟದ ಅಂಗಡಿಗೆ ಬೆಂಕಿ ತಗುಲಿದ್ದು ಸಮೀಪದ ಗೂಡಂಗಡಿ, ಸೈಕಲ್ ರಿಪೇರಿ ಅಂಗಡಿ, ಹೋಟೆಲ್ಗೂ ಹಾನಿಯಾಗಿದೆ.
ಸುಳ್ಯದ ಅಗ್ನಿಶಾಮಕ ದಳ ಹಾಗು ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.