ಮಂಗಳೂರು: ಮಾದಕ ದ್ರವ್ಯದ ನಶೆಯಲ್ಲಿದ್ದ ಇಬ್ಬರು ತೃತೀಯ ಲಿಂಗಿಗಳು ಮತ್ತು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಮಂಗಳೂರಿನ ಕದ್ರಿ ಪೊಲೀಸರು ನಿನ್ನೆ ರಾತ್ರಿ ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಕುಲಶೇಖರದ ಮನೆಯೊಂದರಲ್ಲಿ ಕೆಲವು ಮಂದಿ ಗಾಂಜಾ ಸೇವನೆಯ ನಶೆಯಲ್ಲಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ನೇತೃತ್ವದ ತಂಡ ರಾತ್ರೋ ರಾತ್ರಿ ದಾಳಿ ನಡೆಸಿತು.ಮನೆಯಲ್ಲಿ ಇಬ್ಬರು ತೃತೀಯ ಲಿಂಗಿಗಳು ಮತ್ತು ಓರ್ವ ಮಹಿಳೆ ಪತ್ತೆಯಾಗಿದ್ದಾರೆ.
ಅವರನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.