ಉಡುಪಿ: ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
ಸಂತೆಕಟ್ಟೆಯ ಸೋಲಾಂಗೆ ಸ್ಮಿತಾ ಲೂಯಿಸ್ ಅವರು ಮುಂಬಯಿಗೆ ತೆರಳಿದ್ದು, ನ. 29 ರಂದು ಮರಳಿ ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗವನ್ನು ಮುರಿದು ಕಳ್ಳರು ಮನೆಯಲ್ಲಿದ್ದ 1,13,800 ರೂ.
ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.