Friday, July 19, 2024
spot_img
More

  Latest Posts

  ಕಾರ್ಕಳ: ತೆಲಂಗಾಣ ಶಾಸಕರು ಪ್ರಯಾಣಿಸುತ್ತಿದ್ದ ಜೀಪ್ ಅಪಘಾತ..!

  ಕಾರ್ಕಳ:ತೆಲಂಗಾಣದ ಶಾಸಕರು ಪ್ರಯಾಣಿಸುತ್ತಿದ್ದ ಜೀಪ್ ಅಪಘಾತಕ್ಕೊಳಗಾದ ಘಟನೆ ಮಿಯ್ಯಾರು ಸೇತುವೆ ಬಳಿಯ ಮುಡಾರು- ನಲ್ಲೂರು ಕ್ರಾಸ್ ಬಳಿ ನಡೆದಿದೆ.

  ತೆಲಂಗಾಣದ ಟೆಂಡೂರ್ ಕ್ಷೇತ್ರದ ಶಾಸಕ ಪಂಚುಗುಲ ರೋಹಿತ್‌ ರೆಡ್ಡಿ ಮಂಗಳೂರಿನಿಂದ ಶೃಂಗೇರಿ ಕ್ಷೇತ್ರಕ್ಕೆ ತೆರಳುತ್ತಿದ್ದ ವೇಳೆ ಮುಡಾರು- ನಲ್ಲೂರು ಕ್ರಾಸ್ ಬಳಿ
  ಚಲಿಸುತ್ತಿದ್ದ ಕಾರಿನ ಟಯರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆ.

  ಅಪಘಾತದಲ್ಲಿ ಶಾಸಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.ಅಪಘಾತದ ವೇಳೆ ಕಾರು
  ರಸ್ತೆ ಬದಿಯ ವಿದ್ಯುತ್ ಕಂಬ ಹಾಗೂ ಮರವೊಂದರ ಮಧ್ಯೆ ಸಿಲುಕಿ ಜಖಂಗೊಂಡಿದೆ.

  ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಬೇರೆ ವಾಹನದಲ್ಲಿ ಶಾಸಕರು ಶೃಂಗೇರಿ ಕಡೆಗೆ ಪ್ರಯಾಣಿಸಿದ್ದಾರೆ

  ಶಾಸಕ ರೋಹಿತ್‌ ರೆಡ್ಡಿ ಹೈದರಾಬಾದ್‌ನಿಂದ ಮಂಗಳೂರು ಏರ್‌ಪೋರ್ಟ್‌ಗೆ ಇಂದು ಬೆಳಗ್ಗೆ ಆಗಮಿಸಿದ್ದರು.ಅಲ್ಲಿಂದ ಅವರು ಕಾರ್ಕಳ ಮಾರ್ಗವಾಗಿ ಶೃಂಗೇರಿಗೆ ಹೊರಟಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss