Monday, June 24, 2024
spot_img
More

  Latest Posts

  ಮಂಗಳೂರು: ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ ಹೃದಯಾಘಾತದಿಂದ ನಿಧನ

  ಮಂಗಳೂರು: ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ ಇಂದು ಬೆಳಗ್ಗೆ ಮಹಾಸಮಾಧಿ ಹೊಂದಿದ್ದಾರೆ. 81 ವರ್ಷ ವಯಸ್ಸಾಗಿದ್ದ ಸ್ವಾಮೀಜಿಯವರು, ನಿನ್ನೆ (ಗುರುವಾರ) ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

  ಶ್ರೀ ರಾಮಕೃಷ್ಣ- ವಿವೇಕಾನಂದರ ತತ್ವಾದರ್ಶಗಳಿಂದ ಪ್ರಭಾವಿತರಾದ ಇವರು 1969ರಲ್ಲಿ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿ ಪಡೆದು ಮುಂಬೈ ರಾಮಕೃಷ್ಣ ಮಠಕ್ಕೆ ಬ್ರಹ್ಮಚಾರಿಯಾಗಿ ಸೇರ್ಪಡೆಗೊಂಡರು. ರಾಮಕೃಷ್ಣ ಮಹಾಸಂಘದ 10ನೇ ಅಧ್ಯಕ್ಷ ಸ್ವಾಮಿ ವಿರೇಶ್ವರಾನಂದಜಿಯವರಿಂದ ಮಂತ್ರದೀಕ್ಷೆ ಪಡೆದರು. 1978ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಮುಂಬೈ, ಅರುಣಾಚಲ ಪ್ರದೇಶ ಮತ್ತು ಮಾರಿಷಸ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.

  1980ರಲ್ಲಿ ಮಂಗಳೂರಿಗೆ ಆಗಮಿಸಿದ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ ಅವರು 1998 ರಲ್ಲಿ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿ ನಿಯುಕ್ತರಾದರು. ಅವರ ಅಧ್ಯಕ್ಷಾವಧಿಯಲ್ಲಿ ಶ್ರೀಮಠದಲ್ಲಿ ಭವ್ಯವಾದ ಸಭಾಂಗಣ, ಗ್ರಂಥಾಲಯ ಮತ್ತು ಪುಸ್ತಕ ಮಳಿಗೆ ನಿರ್ಮಾಣಗೊಂಡವು. ಸ್ವಾಮೀಜಿಯವರ ಸಹೃದಯ ವ್ಯಕ್ತಿತ್ವದಿಂದಾಗಿ ಶ್ರೀರಾಮಕೃಷ್ಣರ ಭಾವ ಪ್ರಚಾರವು ಮಂಗಳೂರಿನಲ್ಲಿ ಮತ್ತಷ್ಟು ವಿಸ್ತಾರಗೊಂಡಿತು. ಸ್ವಾಮಿ ಪೂರ್ಣಕಾಮಾನಂದಜಿಯವರು 2010 ರಲ್ಲಿ ತಮ್ಮ ಅಧ್ಯಕ್ಷ ಸ್ಥಾನವನ್ನು ಸ್ವಾಮಿ ಜಿತಕಾಮಾನಂಜೀಯವರಿಗೆ ಹಸ್ತಾಂತರಿಸಿ ನಿವೃತ್ತಿ ಹೊಂದಿದರು. ಮಂಗಳೂರು ರಾಮಕೃಷ್ಣ ಮಠದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4 ಗಂಟೆಗೆ ಬಳಿಕ ಅಂತಿಮ ಕ್ರಿಯೆ ನಡೆಯಿತು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss