Saturday, July 27, 2024
spot_img
More

    Latest Posts

    ಬಂಟ್ವಾಳ: ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆ ಆತ್ಮಹತ್ಯೆ

    ಬಂಟ್ವಾಳ: ಗಂಡನ ಮನೆಯಲ್ಲಿನ ವರದಕ್ಷಿಣೆ ಕಿರುಕುಳ ತಾಳಲಾರದೆ ಮಾನಸಿಕವಾಗಿ ನೊಂದಿದ್ದ ನವ ವಿವಾಹಿತೆಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರದ ನಿವಾಸಿ ನೌಸೀನ್ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.ನೌಸೀನ್ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹ ವಾಗಿದ್ದರು.

    ಪ್ರೇಮವಿವಾಹ ಆದರೂ ಕೂಡ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನವನ್ನು ಉಡುಗೂರೆಯಾಗಿ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಪ್ರೀತಿಸಿ ಮದುವೆಯಾದರಿಂದ ಒಳ್ಳೆ ಹುಡುಗಿ ಸಿಗಲಿಲ್ಲ, ಇಲ್ಲದಿದ್ದರೆ ಒಳ್ಳೆಯ ಹುಡುಗಿ ಸಿಗಬಹುದಿತ್ತು ಎಂದು ಅತ್ತೆ ಝೂಬೈದಾ, ಮಗಳು ಅಜ್ಮೀಯಾ ಮತ್ತು ಗಂಡ ಸೇರಿಕೊಂಡು ಹೀಯಾಳಿಸಿದ್ದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದರು. ಮಾನಸಿಕವಾಗಿ ನೊಂದಿದ್ದ ತಂಗಿ ನೌಸೀನ ಆ.25 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಹೋದರ ನಾಸೀರ್‌ ಆರೋಪಿಸಿದ್ದಾರೆ. ಈ ಸಾವಿನ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಾಸೀರ್ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸಜೀಪ ಮೂಡ ನಿವಾಸಿ ಕೆ.ಎಮ್ ಬಾವ ಅವರ ಮಗಳು ನೌಸೀನ್ ಅವರು ಉಳ್ಳಾಲ ಮೂಲದ ಅಜ್ಮಾನ ಎಂಬವರಿಗೆ ಇನ್ಸ್ಟಾ ಗ್ರಾಂ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿ ಉಂಟಾಗಿ ಮನೆಯವರ ಒಪ್ಪಿಗೆ ಮುಖಾಂತರ ಅ.14 ರಂದು ಮದುವೆಯಾಗಿದ್ದರು. ಆದರೆ ಅಜ್ಮಾನ ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್ ಳ ಒಡವೆಗಳನ್ನು ಮಾರಿದ್ದಾನೆ. ಜೊತೆಗೆ ಇನ್ನಷ್ಟು ಒಡೆವೆಗಳನ್ನು ತರುವಂತೆ ಪೀಡಿಸುತ್ತಿದ್ದ. ಇದು ಅಲ್ಲದೆ,ಅತ್ತೆ ಮತ್ತು ನಾದಿನಿಯವರು ಲವ್ ಮ್ಯಾರೇಜ್ ಆಗಿರುವ ಕಾರಣಕ್ಕಾಗಿ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದರು ಎಂದು ಮನೆಯವರಲ್ಲಿ ತಿಳಿಸಿದ್ದಳು. ಮನೆಯವರ ಕಿರುಕುಳ ತಾಳಲಾರದೆ ನೌಸೀನ್ ಅ.24 ರಂದು ತಾಯಿ ಮನೆಗೆ ಬಂದಿದ್ದಳು. ಮರುದಿನ ಮನೆಯವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಇವಳು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಇವಳ ಸಾವಿಗೆ ಗಂಡ ಮತ್ತು ಅತ್ತೆ,ನಾದಿನಿಯವರೇ ಕಾರಣವಾಗಿದೆ. ಹಾಗಾಗಿ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೌಸೀನ್ ಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನೌಸೀನ್ ಳ ಸಂಬಂಧಿ ಸಿದ್ದೀಕ್ ಒತ್ತಾಯ ಮಾಡಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss