Tuesday, September 17, 2024
spot_img
More

    Latest Posts

    ಉಳ್ಳಾಲ: ಕೇರಳ ರಾಜ್ಯ ಕಬಡ್ಡಿ ತಂಡದ ಮಾಜಿ ನಾಯಕ ಸುನಿಲ್ ಕುಮಾರ್ ನಿಧನ..!

    ಉಳ್ಳಾಲ: ಕೇರಳ ರಾಜ್ಯ ಅಮೆಚೂರು ಕಬಡ್ಡಿ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ತಂಡದ ಮಾಜಿ ಕಬಡ್ಡಿ ಪಟು ಮಂಜೇಶ್ವರ ನಿವಾಸಿ ಸುನಿಲ್ ಕುಮಾರ್ (53) ಸ್ವಗೃಹದಲ್ಲಿ ಇಂದು ನಿಧನ ಹೊಂದಿದರು.

    ಅತೀವ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರು , ಗ್ಯಾಂಗ್ರೀನ್ ಗೆ ಒಳಗಾಗಿ ಹಲವು ತಿಂಗಳಿನಿಂದ ಅಸೌಖ್ಯಕ್ಕೊಳಗಾಗಿದ್ದರು. ಕೇರಳದಲ್ಲಿ ಹಿಂದೆ ಇದ್ದಂತಹ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಆನಂತರ ಉದ್ಯಮ ನಡೆಸುತ್ತಿದ್ದರು. ಕಬ್ಬಡ್ಡಿ ಕೇರಳ ರಾಜ್ಯ ತಂಡದ ನಾಯಕರಾಗಿ ಹಲವು ವರ್ಷಗಳ ಕಾಲ ನೇತೃತ್ವ ವಹಿಸಿ ಹಲವು ಗೆಲುವಿನ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ರಾಷ್ಟ್ರಮಟ್ಟದ ತಂಡದಲ್ಲಿ ಉತ್ತಮ ಆಟಗಾರರಾಗಿ ಮಿಂಚಿದ್ದ ಇವರು , ಕಾಸರಗೋಡು ಜಿಲ್ಲೆಯ ಹಲವು ಯುವ ಆಟಗಾರರಿಗೆ ರಾಜ್ಯ ತಂಡದಲ್ಲಿ ಪ್ರತಿನಿಧಿಸಲು ಅವಕಾಶವನ್ನು ಕಲ್ಪಿಸಿದ್ದರು. ಮೃತರಿಗೆ ಉಮಾಮಹೇಶ್ವರಿ ಕಬ್ಬಡ್ಡಿ ಅಮೆಚೂರು ಅಸೋಸಿಯೇಷನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss