Monday, June 24, 2024
spot_img
More

  Latest Posts

  ಅ.26 ರಂದು ಮೀರಾರೋಡ್ ನಲ್ಲಿ ಸೌಜನ್ಯ ಪರ ಹೋರಾಟಕ್ಕೆ ವೇದಿಕೆ ಸಜ್ಜು

  ಮುಂಬಯಿ: ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕಳೆದ ಒಂದಿಷ್ಟು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಈಗ ಈ ಹೋರಾಟಕ್ಕೆ ಧುಮುಕಲು ಸೌಜನ್ಯ ಪರ ಮುಂಬಯಿ ಸಮಿತಿಯು ಸೌಜನ್ಯ ಪ್ರಕರಣದ ಮರು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್‌ 26ರಂದು ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಪ್ರತಿಭಟನೆಯ ಸೂತ್ರದಾರಿಗಳಾಗಿ ಮುಂಬಯಿ ಸಂಚಾಲಕರಾದ ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ನಿಲೇಶ್ ಪೂಜಾರಿ ಪಲಿಮಾರು ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
  2012ರ ಅಕ್ಟೋಬರ್‌ 9ರಂದು ಸೌಜನ್ಯಾ ಕಾಣೆಯಾಗಿದ್ದು, ಮರುದಿನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಪೊಲೀಸರು, ನಂತರ ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ತಪ್ಪಿತಸ್ಥ ಅಲ್ಲ ಎಂದು ಸಿಬಿಐ ನ್ಯಾಯಾಲಯದ ತೀರ್ಪಿನಲ್ಲಿ ಹೇಳಿದೆ. ಸಿಬಿಐ ತನಿಖೆಯಿಂದಲೂ ಪ್ರಕರಣದ ಆರೋಪಿಗಳು ಯಾರು ಎಂದು ಸ್ಪಷ್ಟ ಆಗಿಲ್ಲ.
  ಈ ನಿಟ್ಟಿನಲ್ಲಿ ಧರ್ಮಸ್ಥಳದಲ್ಲಿ ಹನ್ನೊಂದು ವರ್ಷದ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಕೃತ್ಯಕ್ಕೆ ಸಂಬಂಧಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಮುಬಯಿಯ ಸಮಾನ ಮನಸ್ಕ ತಂಡವೊಂದು ರೂಪುಗೊಂಡಿದ್ದು ಅಗಸ್ಟ್ 14ರಂದು ಪೂರ್ವ ಭಾವಿ ಸಭೆಯನ್ನು ನಡೆಸಲಾಗಿದ್ದು ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು ಮುಂಬಯಿ ಮೀರಾರೋಡ್ ಪರಿಸರದಲ್ಲಿ ಬ್ರಹತ್ ಪ್ರತಿಭಟನೆಯನ್ನು ಆಯೋಜಿಸುವುದಾಗಿ ತೀರ್ಮಾನಿಸಲಾಗಿದೆ.
  ಕಳೆದ 11ವರುಷಗಳ ಹಿಂದೆ ಧಾರುಣವಾಗಿ ಅತ್ಯಾಚಾರಕ್ಕೆ ಒಳಪಟ್ಟು ಬರ್ಬರವಾಗಿ ಹತ್ಯೆಕ್ಕಿಡಾದ ಧರ್ಮಸ್ಥಳದ ಅಪ್ರಾಪ್ತ ಬಾಲಕಿ ಸೌಜನ್ಯಾಳ ನ್ಯಾಯ ಹಾಗೂ ಹಕ್ಕೋತ್ತಾಯಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಭಿನ್ನವಿಸಿ ಮನವಿ ಸಲ್ಲಿಸಲು ಸಮಾಜಪರ ಚಿಂತಕರು, ವಿವಿಧ ಸಂಘಟನೆಗಳ ನಾಯಕರು ಪಾಲ್ಗೊಂಡು ಸಲಹೆ ಸೂಚನೆಗಳನ್ನಿತ್ತು ಇದೇ ಬರುವ ಆಗಸ್ಟ್ 26ರಂದು ಬ್ರಹತ್ ಪ್ರತಿಭಟನೆಯನ್ನು ಆಯೋಜಿಸುವುದಾಗಿ ನಿರ್ಧರಿಸಲಾಗಿದೆ. ಆಗಸ್ಟ್ 26ರ ಶನಿವಾರ ಮಧ್ಯಾಹ್ನ 2ಗಂಟೆಗೆ ಸರಿಯಾಗಿ
  ಸ್ವಾಮಿ ನಾರಾಯಣ ಮಂದಿರ (BAPS), ಸೆಕ್ಟರ್ ನಂ10, ಶಾಂತಿ ನಗರ, ಮಿರಾರೋಡ್ ಮುಂಬಯಿ ಇಲ್ಲಿ ಬ್ರಹತ್ ಪ್ರತಿಭಟನೆ ಜರಗಲಿದೆ.
  ಈ ಪ್ರತಿಭಟನೆಯಲ್ಲಿ ಕೇಂದ್ರ ಬಿಂದುವಾಗಿ ಕಳೆದ 11 ವರುಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಪ್ರಸನ್ನ ರವಿ ಇವರು ಭಾಗಹಿಸಲಿರುವರು. ಪ್ರತಿಭಟನಾ ಸಭೆಯ ಬಳಿಕ ಮೀರಾರೋಡ್ ಶಾಂತಿ ನಗರ ಸೆಕ್ಟರ್ 10 ಶ್ರೀ ಸ್ವಾಮಿ ಅಯ್ಯಪ್ಪ ಮಂದಿರದಲ್ಲಿ ಸೌಜನ್ಯಳಾ ನ್ಯಾಯಕ್ಕಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು
  ತಾವೆಲ್ಲರೂ ಸೌಜನ್ಯಳಿಗಾದ ಅನ್ಯಾಯದ ವಿರುದ್ದ ಧ್ವನಿ ಎತ್ತಿ ನಮ್ಮೊಂದಿಗೆ ಸಹಕರಿಸಿ ಬಡ ಪರಿವಾರಕ್ಕೆ ನ್ಯಾಯ ಒದಗಿಸಲು ನಮ್ಮ ಈ ರಾಜಕೀಯ, ಧರ್ಮ, ಜಾತಿ ರಹಿತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಪ್ರೋತ್ಸಾಹ ನೀಡುವಿರಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss