ತುಳುನಾಡಿನ ದೈವಾರಾಧನೆ ಹಿಂದೂ ಸಂಸ್ಕೃತಿಯ ಮೂಲವೇ ಅಲ್ಲ. ಹಿಂದೂ ಧರ್ಮಕ್ಕೂ ತುಳುನಾಡಿನ ದೈವಾರಾಧನೆಗೂ ಯಾವುದೇ ಸಂಬಂಧವಿಲ್ಲ ಎಂಬ ನಟ ಚೇತನ್ ವಿವಾದಾತ್ಮಕ ಹೇಳಿಕೆಯನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ರವರು ಖಂಡಿಸಿದ್ದಾರೆ.
ತುಳುನಾಡು ಎಂಬುದು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ನಾಡು . ಬೆರ್ಮರ ಸೃಷ್ಟಿ, ಪರಶುರಾಮನ ಸೃಷ್ಟಿ ಎಂದು ನಂಬಿರುವ ತುಳುನಾಡಿನಲ್ಲಿ ದೈವರಾಧನೆ, ನಾಗರಾಧನೆ, ಯಕ್ಷಗಾನ, ಹುಲಿವೇಷ ಮುಂತಾದ ಜಾನಪದ ಆಚರಣೆಗಳು ಚಾಲ್ತಿಯಲ್ಲಿದೆ. ತುಳುನಾಡಿನಲ್ಲಿ ದೇವರಿಲ್ಲದೆ ದೈವಗಳಿಲ್ಲ , ದೈವಗಳಿಲ್ಲದೆ ದೇವರಿಲ್ಲ . ವಿಶೇಷವೆಂದರೆ ಪ್ರತಿಯೊಂದು ದೇವಾಲಯದಲ್ಲೂ ದೈವಗಳಿಗೆ ಆರಾಧನೆ ಹಲವಾರು ಜಾತಿಗಳಿದ್ದು , ಎಲ್ಲರು ಸಮಾನರು . ತುಳುನಾಡಿನ ಸಂಸ್ಕೃತಿ ವಿಚಾರ ಬಂದಾಗ ಕೆಲವೊಂದು ಆಚರಣೆಗಳಿಗೆ ಹಿರಿಯರು ಮಾಡಿಕೊಂಡು ಬಂದಂತಹ ಕಟ್ಟುಪಾಡುಗಳು ಇವೆ. ಈ ಕಟ್ಟುಪಾಡುಗಳನ್ನು ಜನರು ಚೆನ್ನಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ದೈವರಾಧನೆಯಲ್ಲಿ ದೈವ ಪಾತ್ರಿಗಳು ನಲಿಕೆ ಸಮುದಾಯ, ಪರವ , ಪಂಬದ ಸಮುದಾಯದವರು ಮಾಡಿಕೊಂಡು ಬರುತ್ತಿರುವುದು ರೂಢಿ.ವಿವಿಧ ಜಾತಿಯವರು ಸೇರಿಕೊಂಡು ಒಗ್ಗೂಡಿ ನಡೆಸಿಕೊಂಡು ಬರುತ್ತಿದ್ದಾರೆ. ಈ ನಡುವೆ ಸಮಾಜವನ್ನು ಬೇರ್ಪಡಿಸುವರಷ್ಟಿನ ಮಟ್ಟಕ್ಕೆ ನಟ ಚೇತನ್ರವರು ಹೇಳಿಕೆಯನ್ನು ಕೊಡುತ್ತಿದ್ದರೆ. ತುಳುನಾಡಿನಲ್ಲಿ ತುಳುವರು ಏಕತ್ವದಲ್ಲಿ ಬಹುತ್ವವನ್ನು ಕಾಣುವ ತುಳುನಾಡಿನಲ್ಲಿ ದೈವರಾಧನೆಯೆ ಮುಖ್ಯ ಆರಾಧನಾ ಶಕ್ತಿ. ಹಿರಿಯರು ಪಾಲನೆಮಾಡಿಕೊಂಡು ಬಂದಿರುವುದರಿಂದ ನಮಗೆ ಮೂಢನಂಬಿಕೆ ಆಗಿರದೆ ಅಚಲ ನಂಬಿಕೆ ಯಾಗಿದೆ. ಇಲ್ಲಿ ಪ್ರಾದೇಶಿಕವಾಗಿ ಭಿನ್ನತೆ ಇದ್ದರೂ ಸಂಸ್ಕೃತಿ ಒಂದೆ ಆಗಿದ್ದು, ದೈವರಾಧನೆಯಲ್ಲಿ ಸಂಶೋಧಕರು, ಇತಿಹಾಸಕಾರರು ಎಂಬ ಭೇದವಿಲ್ಲ . ಅಂದರೆ ಮಕ್ಕಳಿಗೂ ಕೂಡ ದೈವರಾಧನೆಯ ಅರಿವು ಇರುತ್ತದೆ.
ಇಂತಹ ತುಳುನಾಡಿನ ಭಯ ಭಕ್ತಿಯುಳ್ಳ ದೈವಾರಾಧನೆಯ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ ಚೇತನ್ ರವರು ಕೂಡಲೇ ತುಳುನಾಡಿನ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಇಲ್ಲದೇ ಇದ್ದರೆ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ನಟ ಚೇತನ್ ಮೇಲೆ ಕಪ್ಪು ಪತಾಕೆಯನ್ನು ಹಾರಿಸಲಾಗುವುದು ಎಂದು ಯೋಗೀಶ್ ಶೆಟ್ಟಿಯವರು ತಿಳಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ನಟ ಚೇತನ್ ರವರಿಗೆ ಇದಕ್ಕೆ ತಕ್ಕದಾದ ಉತ್ತರವನ್ನು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.ನಮ್ಮ ಮಣ್ಣಿನ ಕಣ ಕಣದಲ್ಲೂ ದೈವೀ ಶಕ್ತಿ , ಕಲೆ ಇದೆ. ಪ್ರತಿ ಮನೆಯಲ್ಲೂ ದೈವರಾಧನೆ ನಡೆಯುತ್ತದೆ. ತುಳುನಾಡಿನ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಯಾರೇ ಮಾಡಿದರೂ ಕೂಡ ಇದನ್ನು ಕ್ಷಮಿಸಲಾಗುವುದಿಲ್ಲ. ಹಿಂದೂ ಧರ್ಮ ಅಲ್ಲದವರೂ ಕೂಡ ದೈವಾರಾಧನೆಯನ್ನು ನಂಬುವ ಇತಿಹಾಸವಿದೆ. ತುಳುನಾಡಿನ ಬೇರೆ ಬೇರೆ ಕಡೆಗಳಲ್ಲಿ ಬೇರೆ ಧರ್ಮದವರು ತುಳುನಾಡಿನ ದೈವಾರಾಧನೆಯ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟು ಕೊಂಡು ಅರಾಧಿಸಲ್ಪಡುವುದು ಕಂಡು ಬಂದಿದೆ.
ದೈವರಾಧನೆ ಬಗ್ಗೆ ಬಾಯಿಗೆ ಬಂದ ಹಾಗೆ ಏನೇನೊ ಮಾತನಾಡುವುದಕ್ಕಿಂತ ನೇಮ ನಡೆಯುವ ಸ್ಥಳಕ್ಕೆ ಬಂದು ನೋಡಿದಾಗ ಸರಿಯಾದ ಅರಿವು ಮೂಡುವುದು ಜೊತೆಗೆ ದೈವದ ಆಶಿರ್ವಾದ ದೊರಕುತ್ತದೆ.