Saturday, July 27, 2024
spot_img
More

    Latest Posts

    ಇಂದು ಕರ್ನಾಟಕ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟ: ವೆಬ್​ಸೈಟ್​​ನಲ್ಲಿ ರಿಸಲ್ಟ್ ನೋಡೋದು ಹೇಗೆ..?

    ಬೆಂಗಳೂರು: ಇಂದು ಬೆಳೆಗ್ಗೆ 11 ಗಂಟೆಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುದ್ದಿಗೋಷ್ಠಿ ಮೂಲಕ ಫಲಿತಾಂಶ ಪ್ರಕಟಿಸಲಿದೆ.

    ಬಳಿಕ ಬೆಳಗ್ಗೆ 11 ಗಂಟೆಗೆ ಅಧಿಕೃತ ವೆಬ್​ಸೈಟ್​ಗಳಾದ https://kseab.karnataka.gov.in/ ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನ ಪರಿಶೀಲಿಸಬಹುದಾಗಿದೆ.. ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆಸದ ಎಸ್ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಇದು ಹೊರಬೀಳುತ್ತಿದ್ದು, ಮೇ 10ರಂದು ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ, ಎರಡು ದಿನ ಮೊದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಘೋಷಣೆ ಮಾಡಲಾಗ್ತಿದೆ. ಈ ಬಾರಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಫಲಿತಾಂಶ ಪರೀಕ್ಷಿಸುವುದು ಹೇಗೆ?

    ಅಧಿಕೃತ ವೆಬ್‌ಸೈಟ್ sslc.karnataka.gov.in ಭೇಟಿ ನೀಡಿ ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ ಹೊಸ ಪುಟ ತೆರೆಯುತ್ತದೆ, ನಿಮ್ಮ ನೋಂದಣಿ ಸಂಖ್ಯೆಯನ್ನ ನಮೂದಿಸಿ ಫಲಿತಾಂಶವನ್ನು ಪರಿಶೀಲಿಸಿ ಅವಶ್ಯಕತೆ ಇದ್ದರೆ ಡೌನ್‌ಲೋಡ್ ಮಾಡಿ.

    2022- 2023ನೇ ಸಾಲಿನ SSLC ಪರೀಕ್ಷೆಗಳನ್ನು ಕಳೆದ ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಂದು ಆರಂಭವಾಗಿತ್ತು. ಮೇ 10ರಂದು ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಎಲೆಕ್ಷನ್ ರಿಸಲ್ಟ್‌ಗೂ ಎರಡು ದಿನ ಮೊದಲೇ ರಾಜ್ಯದ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸೋ SSLC ಫಲಿತಾಂಶ ಪ್ರಕಟವಾಗಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss