Saturday, July 27, 2024
spot_img
More

    Latest Posts

    ಕಟೀಲು ಮೇಳದ ಕಾಲಮಿತಿ ಯಕ್ಷಗಾನಕ್ಕೆ ವಿರೋಧ- ನ.06ರಂದು “ಶ್ರೀ ಕಟೀಲಮ್ಮನೆಡೆ ಭಕ್ತರ ನಡೆ”

    ಮಂಗಳೂರು: ಶ್ರೀ ಕಟೀಲು ಅಮ್ಮನವರಿಗೆ ಯಕ್ಷಗಾನ ಬಯಲಾಟ ಅತ್ಯಂತ ಪ್ರಿಯವಾಗಿದೆ. ಜನತೆ ಭಕ್ತಿ,ಶ್ರದ್ಧೆ,ಅಚಲ ನಂಬಿಕೆಯಿಂದ ಸಮರ್ಪಿಸುವ ಗೆಜ್ಜೆಸೇವೆ.ಯಕ್ಷಗಾನದಲ್ಲಿ ಕಟೀಲಮ್ಮನವರೇ ವಿರಾಜಮಾನರಾಗಿದ್ದು,ಭಕ್ತರನ್ನು ಹರಸುತ್ತಾರೆಂದು ಪ್ರತೀತಿ.ಯಕ್ಷಗಾನದ ಕಾಲಮಿತಿ ನಿರ್ಧಾರದಿಂದ ಮೂಲ ಆಶಯ ಸೊರಗಿ ಜನರ ನಂಬಿಕೆಗೆ ಘಾಸಿ ಉಂಟಾಗಿದ್ದು,ಪರಂಪರೆಗೆ ಚ್ಯುತಿ ತಂದಿದೆ.ಶ್ರೀ ಕಟೀಲು ಮೇಳದ ಯಕ್ಷಗಾನ ಹಿಂದಿನಂತೆಯೇ ಬೆಳಗ್ಗಿನವರೆಗೆ ನಡೆಯಲೇಬೇಕೆಂದು ನವೆಂಬರ್ 06 ಆದಿತ್ಯವಾರ ದಂದು ಕಟೀಲಮ್ಮನೆಡೆಗೆ ಭಕ್ತರು ನಡೆ ನಡೆಸಿ ಶ್ರೀ ದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಾಗಿ ಯಕ್ಷ ಸೇವೆ ಸಮನ್ವಯ ಸಮಿತಿ ದ.ಕ ಮತ್ತು ಉಡುಪಿ ಜಿಲ್ಲೆ ತೀರ್ಮಾನಿಸಿದೆ

    ಕಟೀಲು ಮೇಳದ ಯಕ್ಷಗಾನವನ್ನು ಕಾಲಮಿತಿಗೆ ಒಳಪಡಿಸುವುದನ್ನು ವಿರೋಧಿಸಿ ಬಜಪೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಪಾದಯಾತ್ರ ನಡೆಸಲು ನಿರ್ಧರಿಸಲಾಗಿದೆ.ಯಕ್ಷಗಾನದ ಕಾಲಮಿತಿ ಪ್ರಯೋಗದ ಪ್ರಸ್ತಾವ ಕೈಬಿಡುವಂತೆ ಒತ್ತಾಯಿಸಿ ಸೇವಾ ಸಮಿತಿಗಳು ಮತ್ತು ಕಾಯಂ ಸೇವಾದಾರರು ಇತ್ತೀಚೆಗೆ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು. ಆದರೆ ಕಟೀಲು ಆಡಳಿತ ಮಂಡಳಿ ಸರಿಯಾದ ಸ್ಪಂದನೆ ನೀಡದ ಕಾರಣ ಇದೀಗ ಪಾದಯಾತ್ರೆ ನಡೆಸಲು ಯಕ್ಷ ಸೇವೆ ಸಮನ್ವಯ ಸಮಿತಿ ದ.ಕ ಮತ್ತು ಉಡುಪಿ ಜಿಲ್ಲೆ ನಿರ್ಧರಿಸಿದೆ.ಶ್ರೀ ಕಟೀಲು ಮೇಳದ ಯಕ್ಷಗಾನ ಹಿಂದಿನಂತೆಯೇ ಬೆಳಗ್ಗಿನವರೆಗೆ ನಡೆಯಲೇಬೇಕೆಂದು ನವೆಂಬರ್ 06 ಆದಿತ್ಯವಾರ ದಂದು ಕಟೀಲಮ್ಮನೆಡೆಗೆ ಭಕ್ತರು ನಡೆ ನಡೆಸಿ ಶ್ರೀ ದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಾಗಿ ಯಕ್ಷ ಸೇವೆ ಸಮನ್ವಯ ಸಮಿತಿ ದ.ಕ ಮತ್ತು ಉಡುಪಿ ಜಿಲ್ಲೆ ತೀರ್ಮಾನಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss