Friday, July 26, 2024
spot_img
More

    Latest Posts

    ಬಾಹ್ಯಾಕಾಶ ಕೇಂದ್ರದಿಂದ ವಾಪಸ್ಸಾಗುತ್ತಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

    ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಗಗನಯಾತ್ರಿ ಮತ್ತು ಸ್ಪೇಸ್ ಎಕ್ಸ್ ಕ್ರ್ಯೂ-3 ಕಮಾಂಡರ್ ಭಾರತೀಯ ಮೂಲದ ರಾಜಾಚಾರಿಯವರು ತಮ್ಮ‌ ತಂಡದ ಸಹ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ನಿಂದ ಭೂಮಿಗೆ ಇದೇ ತಿಂಗಳು ಮರಳಿ ಹಿಂತಿರುಗುತ್ತಿದ್ದಾರೆ.

    ಈ ತಿಂಗಳಲ್ಲೇ ಅವರು ಫ್ಲೋರಿಡಾದಲ್ಲಿ ಬಂದು ಇಳಿಯುವುದು ನಿಶ್ಚಯವಾಗಿದೆ, ಈ ಮೂಲಕ ತಮ್ಮ ಕಾರ್ಯಾಚರಣೆ ಮುಕ್ತಾಯಗೊಳಿಸುತ್ತಾರೆ.

    ಕ್ರ್ಯೂ-3ನ ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಕಳೆದ ವರ್ಷ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌ಗೆ ನಾಲ್ಕು ಗಗನಯಾತ್ರಿಗಳ ತಂಡವನ್ನು ಕೊಂಡೊಯ್ದಿತ್ತು. ಮಿಷನ್ ಕಮಾಂಡರ್ ರಾಜಚಾರಿ, ಪೈಲಟ್ ಟಾಮ್ ಮಾರ್ಷ್‌ಬರ್ನ್, ಮಿಷನ್ ಸ್ಪೆಷಲಿಸ್ಟ್ ಕೈಲಾ ಬ್ಯಾರನ್ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಗಗನಯಾತ್ರಿ ಮಥಿಯಾಸ್ ಮೌರೆರ್ ತಂಡದಲ್ಲಿದ್ದರು. ಕ್ರ್ಯೂ-3 ಗಗನಯಾತ್ರಿಗಳು ನವೆಂಬರ್ 10, 2021 ರಂದು ಉಡಾವಣೆಯಾದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್‌‌ನಲ್ಲಿ ವಾಸಿಸುತ್ತಿದ್ದು ಕೆಲಸ ಮಾಡುತ್ತಿದ್ದಾರೆ.

    ನಾಸಾದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಾರ್ಯಾಚರಣೆಯ ಸಮಯದಲ್ಲಿ, ಕೆಲವು ಗಮನಾರ್ಹ ಪ್ರಯೋಗಗಳನ್ನು ಮಾಡಿದ್ದು, ಸಸ್ಯ ಬೆಳವಣಿಗೆಯ ಪ್ರಯೋಗಗಳು, ಬೆಳೆಗಳನ್ನು ಬೆಳೆಯಲು ಹೊಸ ವ್ಯವಸ್ಥೆ ಪರೀಕ್ಷಿಸುವುದು ಮತ್ತು ಹತ್ತಿ ಸಸಿಗೆ ಸಂಭಾವ್ಯ ಬರ- ನಿರೋಧಕ ಕುರಿತು ಅಧ್ಯಯನ ಮಾಡಲಾಗಿದೆ.

    ಹ್ಯಾಂಡ್‌ಹೆಲ್ಡ್ ಬಯೋಪ್ರಿಂಟರ್ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿದ್ದರು. ಹೀಗೆ ಅನೇಕ ಸಂಗತಿಗಳನ್ನು ಪ್ರಯೋಗ ಮಾಡಿ ಮಾಹಿತಿ ಕಳಿಸಿದ್ದು, ಯಶಸ್ವಿಯಾಗಿ ಹಿಂದಿರುಗುವ ಪ್ರಯತ್ನದಲ್ಲಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss