Saturday, July 27, 2024
spot_img
More

    Latest Posts

    ನಟಿ ಸೋನಂ ಕಪೂರ್ ಮನೆಯಲ್ಲಿ ಕೋಟಿ ಕೋಟಿ ಕಳ್ಳತನ : ಮನೆಯಲ್ಲೇ ಇದ್ದು ಹೊಂಚು ಹಾಕಿದ್ದ ‘ಖತರ್ನಾಕ್ ನರ್ಸೆ’ ಅರೆಸ್ಟ್ !!!

    ನವದೆಹಲಿ: ಖ್ಯಾತ ಬಾಲಿವುಡ್ ನಟಿ ಸೋನಂ ಕಪೂರ್ ಅವರ ದೆಹಲಿ ನಿವಾಸದಲ್ಲಿನ ಕೋಟಿ ಕೋಟಿ ರೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಅಚ್ಚರಿ ಎಂದರೆ ಈ ಭಾರಿ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವುದು ನಟಿ ಸೋನಂ ಕಪೂರ್ ಮನೆಯಲ್ಲಿ ತಿಂಗಳುಗಳ ಗಟ್ಟಲೆ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಮಹಿಳೆ ಮತ್ತು ಆಕೆಯ ಗಂಡ…

    ಸೋನಂ ಕಪೂರ್ (Sonam Kapoor) ಹಾಗೂ ಆನಂದ್ ಅಹುಜಾ (Anand Ahuja) ದೆಹಲಿ ನಿವಾಸದಲ್ಲಿ ನರ್ಸ್​ ಆಗಿದ್ದ ಅಪರ್ಣಾ ವಿಲ್ಸನ್ ಹಾಗೂ ಅವಳ ಗಂಡ ನರೇಶ್ ಕುಮಾರ್ ಈ ಕಳ್ಳತನ ಮಾಡಿದ್ದರು.

    ಘಟನೆ ವಿವರ
    ದೆಹಲಿ ಮನೆಯಲ್ಲಿ ಸೋನಂ ವಾಸ ಮಾಡುತ್ತಿಲ್ಲ. ಆದರೆ, ಅವರ ಮಾವ ಹರೀಶ್ ಅಹುಜಾ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ವಾಸವಾಗಿದ್ದಾರೆ. ಇವರ ಜತೆಗೆ ಆನಂದ್​ ಅವರ ಅಜ್ಜಿ ಸರಳಾ ಅಹುಜಾ ಕೂಡ ಇವರ ಜತೆಗೇ ಇದ್ದಾರೆ. ಇತ್ತೀಚೆಗೆ ಪ್ರಿಯಾ ಅವರು ಕಬೋರ್ಡ್​ ತೆಗೆದು ನೋಡಿದ್ದರು. ಈ ವೇಳೆ ಜ್ಯುವೆಲರಿ ಹಾಗೂ ನಗದು ಕಾಣೆ ಆಗಿರುವುದು ಗಮನಕ್ಕೆ ಬಂದಿತ್ತು. ಕಳೆದ ಎರಡು ವರ್ಷಗಳಿಂದ ಕೊವಿಡ್ ಇದ್ದ ಕಾರಣ ಪ್ರಿಯಾ ಹೆಚ್ಚು ಸುತ್ತಾಟ ನಡೆಸಿಲ್ಲ. ಈ ಕಾರಣಕ್ಕೆ ಅವರು ಜ್ಯುವೆಲರಿ ಬಳಕೆ ಮಾಡಿರಲಿಲ್ಲ. ಜ್ಯುವೆಲರಿ ಇರುವ ಕಬೋರ್ಡ್​ ಕೊನೆಯ ಬಾರಿ ತಾವು ​ಪರಿಶೀಲಿಸಿದ್ದು ಎರಡು ವರ್ಷಗಳ ಹಿಂದೆ ಎಂದು ಅವರು ಹೇಳಿಕೊಂಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

    ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದ್ದು, ಈ ಪೈಕಿ ಅಪರ್ಣಾ ಈ ಕಳ್ಳತನದ ಮುಖ್ಯ ರುವಾರಿ. ಈಕೆ ಪ್ರಿಯಾ ಅಹುಜಾ ಅವರ ಆರೈಕೆ ನೋಡಿಕೊಳ್ಳೋಕೆ ಇವರ ಮನೆಯಲ್ಲಿ ವಾಸವಾಗಿದ್ದಳು. ಆಕೆ ಈ ಹಣ ಹಾಗೂ ಚಿನ್ನವನ್ನು ಕದ್ದಿದ್ದಳು. ಈ ಕೃತ್ಯಕ್ಕೆ ಅವಳ ಪತಿ ಸುರೇಶ್ ಸಹಾಯ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿತ್ತು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss