Tuesday, July 16, 2024
spot_img
More

  Latest Posts

  ಖ್ಯಾತ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ- ಆರೋಗ್ಯ ಸ್ಥಿತಿ ಗಂಭೀರ..!

  ಕೊಚ್ಚಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುವ  ಸಂಖ್ಯೆ ಹೆಚ್ಚಾಗಿದ್ದು, ಇದೀಗ ನಟ ವಿಜಯ ರಾಘವೇಂದ್ರ ಪತ್ನಿ, ನಿರ್ಮಾಪಕಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿರುವ ವಿಚಾರ ಇಡೀ ಸ್ಯಾಂಡಲ್ ವುಡ್ ಗೆ  ಶಾಕ್ ನೀಡಿದ ಬೆನ್ನಲೇ ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ  ಸಿದ್ದಿಕಿ ಅವರಿಗೆ ಸೋಮವಾರ ಸಂಜೆ ವೇಳೆ ತೀವ್ರ ಹೃದಯಾಘಾತವಾಗಿದ್ದು, ಸ್ಥಿತಿ ಚಿಂತಾಜನಕ ಎನ್ನುವ ಮಾಹಿತಿ ಹೊರ ಬಿದ್ದಿದೆ.

  ಸೋಮವಾರ ಸಂಜೆ ವೇಳೆ ಸಿದ್ದಿಕಿ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  ಎಕ್ಸ್ ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಬೆಂಬಲದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇದೆ.

  24 ಗಂಟೆ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  ಸಿದ್ದಿಕಿ ಅವರು ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ದೃಢಪಡಿಸಿವೆ.

  ತೆಲುಗು, ಮಲಯಾಳಂ, ಹಿಂದಿ ಸಿನಿಮಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿದ್ದಿಕಿ, ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು.

  ಕಾಬುಲಿವಾಲಾ, ಗಾಡ್ ಫಾದರ್, ರಾಮ್‍ ಜಿ ರಾವ್ ಸ್ಪೀಕಿಂಗ್, ಫ್ರೆಂಡ್ಸ್, ಹಿಟ್ಲರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಿದ್ದಿಕಿ ಆಕ್ಷನ್ ಕಟ್ ಹೇಳಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss