ಮಂಗಳೂರು: ಶ್ರೀ ದತ್ತಾತ್ರೇಯ ಭಜನಾ ಮಂದಿರ ಜಪ್ಪುಪಟ್ಣ ಇದರ 62ನೇ ವಾರ್ಷಿಕ ಏಕಾಹ ಭಜನಾ ಮಂಗಳೋತ್ಸವವು ಮಹಾಮಂಗಳಾರತಿಯೊಂದಿಗೆ ಇಂದು ಸಂಪನ್ನಗೊಂಡಿತು.
ದತ್ತಾತ್ರೇಯ ಭಜನಾ ಮಂಡಳಿ ಜಪ್ಪುಪಟ್ಣ ಇದರ ಕಾರ್ಯಕ್ರಮದಲ್ಲಿ ಜಪ್ಪು ಪ್ರದೇಶದಲ್ಲಿ ಮೂರು ದಶಕಗಳಿಂದ ಹಲವಾರು ಸಮಾಜಮುಖಿ ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಜನಪ್ರಿಯವಾಗಿರುವ ಮಾಜಿ ಮ.ನ.ಪಾ. ಸದಸ್ಯ , ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದು ಜಪ್ಪು ಪರಿಸರಕ್ಕೆ ಹೆಮ್ಮೆಯ ವಿಷಯ ವಾಗಿದ್ದು ಇಂದು 16-12-2022 ರಂದು ಜಪ್ಪುಪಟ್ಣದ ದತ್ತಾತ್ರೇಯ ಭಜನಾ ಮಂದಿರದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಧವ ಸುವರ್ಣ ಗೌರವಾಧ್ಯಕ್ಷರು ಮತ್ತು ಪ್ರಧಾನ ಅರ್ಚಕರು, ರತನ್ ಸುವರ್ಣ ಅಧ್ಯಕ್ಷರು, ಯೋಗೀಶ್ ಸುವರ್ಣ ಉಪಾಧ್ಯಕ್ಷರು, ಚೇತನ್ ಕೋಟ್ಯಾನ್ ಕಾರ್ಯದರ್ಶಿ,ಅಶೋಕ್ ಸುವರ್ಣ ಅರ್ಚಕರು, ಪೃಥ್ವಿರಾಜ್ ಅಮೀನ್ ಜೊತೆ ಕಾರ್ಯದರ್ಶಿ, ಶಶಿಕಾಂತ್ ಸುವರ್ಣ ಕೋಶಾಧಿಕಾರಿ,ಸುದರ್ಶನ್ ಜೊತೆ ಕಾರ್ಯದರ್ಶಿ,ಕೂಸಪ್ಪ ಬಂಗೇರ ಉಳ್ಳಾಲ ಮಾಸ್ಟರ್,ಲೋಹಿತಾಕ್ಷ ಎ.ಪುತ್ರನ್,ಮಟ್ಟುಪಟ್ನ ಹೆಜಮಾಡಿ ಮಾಸ್ಟರ್,ಕೃಷ್ಣ ಅಮೀನ್ ಭಜನಾ ಸಂಚಾಲಕರು ಹಾಗೂ ಕಾರ್ಯಕಾರಿ ಸಮಿತಿ,ಮಹಿಳಾ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.