Thursday, April 18, 2024
spot_img
More

  Latest Posts

  ನಾಯಿಗೆ ಆಹಾರ ನೀಡುವ ವಿಚಾರದಲ್ಲಿ ಜಗಳ, ಗೆಳತಿಯ ತಾಯಿಗೆ ಗುಂಡು ಹಾರಿಸಿದ ವ್ಯಕ್ತಿ.!

  ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕ್ಷುಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಮಹಿಳೆಗೆ ಗುಂಡು ಹಾರಿಸಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.ಸಾಕು ನಾಯಿಗೆ ಆಹಾರ ಬಡಿಸುವ ವಿಚಾರದಲ್ಲಿ ವಾದ-ವಿವಾದ ಉಂಟಾಗಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ತಾಯಿಗೆ ಗುಂಡು ಹಾರಿಸಿದ್ದಾನೆ.

  ಸೆಂಟ್ರಲ್ ದೆಹಲಿಯ ದೇಶ್ ಬಂಧು ಗುಪ್ತಾ ರಸ್ತೆ ಪ್ರದೇಶದಲ್ಲಿ ಶನಿವಾರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಆತನ ಗೆಳತಿ ಜೊತೆ ನಾಯಿಗೆ ಊಟ ಹಾಕುವ ವಿಚಾರವಾಗಿ ಜಗಳ ವಾಡುತ್ತಿದ್ದನು. ಗಲಾಟೆ ತಡೆಯಲು ಯುವತಿ ತಾಯಿ ಮದ‍್ಯೆ ಪ್ರವೇಶಿಸಿದ್ದಳು. ಆಗ ವ್ಯಕ್ತಿ ತನ್ನ ಗೆಳತಿ ಮತ್ತು ಅವಳ 40 ವರ್ಷದ ತಾಯಿಗೆ ಬೆದರಿಕೆ ಹಾಕಲು ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಿದ್ದನು. ಆದರೆ ಬುಲೆಟ್ ಆಕಸ್ಮಿಕವಾಗಿ ಮಹಿಳೆಗೆ ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸದ್ಯ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

  ಗಾಯಗೊಂಡಿರುವ ಮಹಿಳೆಯ ಮಗಳು ಮತ್ತು ಆರೋಪಿ ಸಂಬಂಧ ಹೊಂದಿದ್ದರು. ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಅವರ ಸಾಕು ನಾಯಿಯ ಬಗ್ಗೆ ತೀವ್ರ ಜಗಳವಾಡಿದ್ದರು. ಜಗಳವು ಸಣ್ಣ ವಿಷಯಕ್ಕೆ ಆಗಿತ್ತು. ಮಹಿಳೆ ನಾಯಿಗೆ ಆಹಾರ ನೀಡಲು ಬಯಸಿದ್ದಳು. ಆದರೆ ಆರೋಪಿ ಆಹಾರ ನೀಡಲು ಇಷ್ಟವಿರಲಿಲ್ಲ. ವಾದ -ವಿವಾದ ದೊಡ್ಡ ಜಗಳಕ್ಕೆ ಕಾರಣವಾಯಿತ್ತು. ಯುವತಿ ತನ್ನ ತಾಯಿಗೆ ಕರೆ ಮಾಡಿದ್ದಳು. ಆಗ ಮಹಿಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆರೋಪಿ ಮಹಿಳೆ ಮತ್ತು ಅವನ ಮಗಳಿಗೆ ಬೆದರಿಕೆ ಹಾಕಲು ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss