ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಒಂಟಿ ಸಲಗವೊಂದು ಕಂಡುಬಂತು. ಅಲ್ಲದೇ ಇದು ಪಾದಚಾರಿಯೊಬ್ಬರನ್ನು ಗಾಯಗೊಳಿಸಿತು. ಶಿರಾಡಿ ಘಾಟಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು ಪಾದಚಾರಿಯೊಬ್ಬರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿತು. ಗಾಯಾಳುವನ್ನು ಸಕಲೇಶಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ಹೆದ್ದಾರಿಯಲ್ಲಿಯೇ ಓಡಾಟ ನಡೆಸಿದ್ದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
©2021 Tulunada Surya | Developed by CuriousLabs