ದಿನಾಂಕ 26-09-2023 ರಂದು ಮಂಗಳವಾರ ಬೆಳ್ಳಗೆ 11 ಘಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಕಚೇರಿಯಲ್ಲಿ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಅವರು ಮಂಗಳೂರು ನಗರದ ನೂತನ ಅಧ್ಯಕ್ಷರಾದ ಶರಣ್ ರಾಜ್ ಕೆ ರ್ ಅವರ ಹೆಸರನ್ನು ಘೋಷಿಸಿ ಬಳಿಕ ಅವರಿಗೆ ಸಂಘಟನೆಯ ಶಾಲು ಹಾಕಿ ಪುಷ್ಪ ಗುಚ್ಛ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಶರಣ್ ರಾಜ್ ಅವರು ಎಂ. ಬಿ. ಎ ಪದವಿದಾರರಾಗಿದ್ದು. ವಾಸ್ತುಶಿಲ್ಪ ಪ ಪರಿಣತರಾಗಿರುತ್ತಾರೆ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಇವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕಷ್ಟದವರ ಪರವಾಗಿ ಸೇವೆ ಸಲ್ಲಿಸುತಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯ ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ ಇವರು ಗೌರವ ಡಾಕ್ಟರೇಟ್ ಪಡೆದಿರುತ್ತಾರೆ. ಇವರು ಸಿನೆಮಾ ನಿರ್ಮಾಪಕರಾಗಿದ್ದು ತುಳುನಾಡಿನ ಕಲೆ ಸಂಸ್ಕೃತಿ ಬಗ್ಗೆ ಒಲವು ಹೊಂದಿದ್ದು ಹಲವಾರು ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಇವರು ಮಂಗಳೂರು ನಗರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಮುಂದಿನ ದಿನಗಳಲ್ಲಿ ತುಳುನಾಡು ರಕ್ಷಣಾ ವೇದಿಕೆ ಇನ್ನಷ್ಟು ಜನ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಲಿಷ್ಠವಾಗಿ ಮೂಡಲಿದೆ ಎಂದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶರಣ್ ರಾಜ್ ರವರು ಮಾತನಾಡುತ್ತಾ ನನಗೆ ಕೊಟ್ಟ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದುಪಯೋಗಿಸಿಕೊಂಡು ತುಳುನಾಡ ರಕ್ಷಣಾ ವೇದಿಕೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ಪ್ರಯತ್ನಿಸುದ್ದಾಗಿ ತಿಳಿಸಿದರು.
ಸಂಘಟನೆಯ ಮುಖಂಡರುಗಳಾದ ರಮೇಶ್ ಪೂಜಾರಿ, ಕ್ಲೀಟಸ್ ಲೋಬೊ, ಮುನೀರ್ ಮುಕ್ಕಚೇರಿ, ಶಾರದ ಶೆಟ್ಟಿ, ಶೋನ್ ಡಿಸೋಜ, ಗೈಟನ್ ಡಿಸೋಜ, ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಸೇರಿದಂತೆ ಹಲವಾರು ಪ್ರಮುಖ ಪದಾಧಿಕಾರಿಗಳು ನೂತನ ನಗರ ಅದ್ಯಕ್ಷರಿಗೆ ಶುಭ ಹಾರೈಸಿದರು. ಮುಂದಿನ ಕೆಲವು ದಿನಗಳಲ್ಲಿ ಮಂಗಳೂರು ನಗರದ ಸಮಿತಿಯ ಇತರ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

