Tuesday, October 22, 2024
spot_img
More

    Latest Posts

    ಶಕ್ತಿ ಯೋಜನೆ: 3ನೇ ದಿನ 51.52 ಲಕ್ಷ ಮಹಿಳೆಯರು ಉಚಿತ ಪ್ರಯಾಣ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಜೂನ್.11ರಿಂದ ಆರಂಭಗೊಂಡ ಈ ಯೋಜನೆ, ಜೂನ್.13ಕ್ಕೆ ಮೂರನೆ ದಿನವಾಗಿತ್ತು.

    ಇಂದು ನಾಲ್ಕನೆ ದಿನವಾಗಿದೆ. ನಿನ್ನೆ ಬರೋಬ್ಬರಿ 51.52 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ.

    ಇಂದು ಕೆ ಎಸ್ ಆರ್ ಟಿ ಸಿ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 13-06-2023ರಂದು KSRTC ಬಸ್ಸಿನಲ್ಲಿ 13,97,665, BMTC ಬಸ್ಸಿನಲ್ಲಿ 20,56,856, NWKRTCಯಲ್ಲಿ 11,08,930 ಮಹಿಳೆಯರು ಹಾಗೂ KKRTC ಸಾರಿಗೆ ಬಸ್ಸುಗಳಲ್ಲಿ 5,89,318 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದೆ.

    ಮೂರನೆ ದಿನದ ನಿನ್ನೆ ಒಟ್ಟು ಸಾರಿಗೆ ಬಸ್ಸುಗಳಲ್ಲಿ 1,16,66,621 ಮಂದಿ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇವರಲ್ಲಿ ಉಚಿತವಾಗಿ ಸಂಚರಿಸಿದಂತ ಮಹಿಳೆಯರು ಬರೋಬ್ಬರಿ 51,52,769 ಆಗಿದ್ದಾರೆ. ಇದಕ್ಕಾಗಿ 10,82,02,191 ಹಣ ಖರ್ಚಾಗಿದೆ ಎಂಬುದಾಗಿ ಮಾಹಿತಿ ನೀಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss