Saturday, April 20, 2024
spot_img
More

    Latest Posts

    ಶಬರಿಮಲೆ ಮದ್ಯ,ಡ್ರಗ್ಸ್‌,ತಂಬಾಕು ಉತ್ಪನ್ನಗಳ ಬಳಕೆ ನಿಷೇಧ: ಕೇರಳ ಸರ್ಕಾರ

    ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ‘ಮದ್ಯ ಮತ್ತು ಡ್ರಗ್‌’ ಮುಕ್ತ ಎಂದು ಕೇರಳ ಸರ್ಕಾರ ಘೋಷಿಸಿದೆ. ವಾರ್ಷಿಕ ಎರಡು ತಿಂಗಳ ಕಾಲದ ಶಬರಿಮಲೆ ಯಾತ್ರೆ ಪ್ರಾರಂಭಕ್ಕೆ ಕೆಲ ದಿನ ಮೊದಲೇ ಈ ಘೋಷಣೆ ಹೊರಬಿದ್ದಿದೆ.

    ಶಬರಿಮಲೆ ಯಾತ್ರೆಯ ವಾರ್ಷಿಕ ದರ್ಶನ ದೇಶದ ಲಕ್ಷಾಂತರ ಭಕ್ತರನ್ನು ಆಕರ್ಷಿಸಲಿದ್ದು, ನ.17ರಿಂದ ಪ್ರಾರಂಭವಾಗಿ ಜ.15,2023ರವರೆಗೆ ನಡೆಯಲಿದೆ. ಸನ್ನಿಧಾನದ ಹೊರತಾಗಿ ಪಂಪ, ತ್ರಿವೇಣಿ, ಮರಕೂಟಂ, ಶಬರಿ ಪೀಠ ಮತ್ತು ಸುತ್ತಮುತ್ತಲಿನ ಕೆಲ ಗ್ರಾಮಗಳನ್ನು ‘ಮದ್ಯ ಮತ್ತು ಡ್ರಗ್‌’ ಮುಕ್ತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. ನ.14ರಿಂದ ಜ.22ರವರೆಗೆ ಈ ಪ್ರದೇಶದಲ್ಲಿ ಮದ್ಯ, ಡ್ರಗ್ಸ್‌, ತಂಬಾಕು ಉತ್ಪನ್ನಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

    ಅಯ್ಯಪ್ಪ ದೇವಾಲಯ ಪ್ರವೇಶಿಸುವ ಭಕ್ತರು ಈ ಬಗ್ಗೆ ಕಾಳಜಿ ವಹಿಸಬೇಕೆಂದು ರಾಜ್ಯ ಸರ್ಕಾರ ಹೇಳಿದೆ. ಪೊಲೀಸ್‌, ಅಬಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಆದೇಶದ ಕಟ್ಟುನಿಟ್ಟಿನ ಪಾಲನೆಗಾಗಿ ಜಂಟಿ ದಾಳಿ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss