Saturday, July 27, 2024
spot_img
More

    Latest Posts

    ಬೆಳ್ತಂಗಡಿ: ಸರಣಿ ಕಳ್ಳತನಗೈದ ಅಂತರ್‌ ಜಿಲ್ಲಾ ಕಳ್ಳನ ಸೆರೆ

    ಬೆಳ್ತಂಗಡಿ: ಕೆಲವು ದಿನಗಳಿಂದ ಧರ್ಮಸ್ಥಳ, ಮುಂಡಾಜೆ, ಕಕ್ಕಿಂಜೆ, ಉಜಿರೆ, ಸೋಮಂತಡ್ಕ, ಕಲ್ಮಂಜ, ಕನ್ಯಾಡಿ, ಗುರುವಾಯನಕೆರೆ ನೆರಿಯ, ವೇಣೂರು ಮೊದಲಾದೆಡೆ ಕಳ್ಳತನಗೈದಿದ್ದ ಅಂತರ್ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಕಾರ್ಕಳ ತಾಲೂಕು ನಿಟ್ಟೆ ಅಜೊjಟ್ಟು ನಿವಾಸಿ ಸುರೇಶ ಕೆ.ಪೂಜಾರಿ (50) ಎಂದು ಗುರುತಿಸಲಾಗಿದೆ.

    ಈತ ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟಿಯೊಂದನ್ನು ಕಳ್ಳತನಗೈದು ಅದರಲ್ಲಿ ಸುತ್ತಾಡುತ್ತ ಒಬ್ಬಂಟಿಯಾಗಿ ರಾತ್ರಿ ವೇಳೆ ಹಲವೆಡೆ ಕಳ್ಳತನ ಕೃತ್ಯವೆಸಗುತ್ತಿದ್ದನೆಂದು ತನಿಖೆಯಿಂದ ದೃಢಪಟ್ಟಿದೆ. ಆ. 9ರಂದು ಸೋಮಂತಡ್ಕ ಪೇಟೆಯ ಪ್ರಸನ್ನ ಪ್ರಾವಿಜನ್‌ ಸ್ಟೋರ್‌ನ ಬಾಗಿಲು ಮುರಿದು ಡ್ರಾವರ್‌ನಲ್ಲಿಟ್ಟಿದ್ದ 50 ಸಾವಿರ ರೂ. ನಗದು ಕಳ್ಳತನ ಗೈದಿರುವ ಬಗ್ಗೆ ಮಾಲಕ ಪ್ರಸನ್ನ ಆರಿಗ ಅವರು ಠಾಣೆಗೆ ನೀಡಿದ್ದ ದೂರಿನ ವಿಚಾರಣೆಗಾಗಿ ಸಿದ್ದಗೊಳಿಸಿದ್ದ ಪೊಲೀಸ್‌ ತಂಡ ಈ ಅರೋಪಿಯನ್ನು ಬಲೆಗೆ ಕೆಡವಿದೆ.

    ಎಸ್‌.ಪಿ.ರಿಷ್ಯಂತ್‌ ಸಿ.ಬಿ.ಅವರ ನಿರ್ದೇಶನದಲ್ಲಿ, ಎಡಿಶನಲ್‌ ಎಸ್‌ಪಿ ಧರ್ಮಪ್ಪ ಎನ್‌.ಎಂ., ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್‌ ಸಿಂಗ್‌ ಥೋರಾಟ್‌, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ ಮಾರ್ಗದರ್ಶನದಲ್ಲಿ ಎಸ್‌ಐಗಳಾದ ಅನೀಲ್‌ ಕುಮಾರ್‌ ಡಿ., ಸಮರ್ಥ ಗಾಣಿಗೇರ್‌, ಲೋಲಾಕ್ಷ ಪಿ.ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ಕುಖ್ಯಾತ ಕಳ್ಳನಾಗಿರುವ ಈತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆ, ಶಿರ್ವ, ಹಿರಿಯಡಕ, ಪಡುಬಿದ್ರಿ, ಮೂಲ್ಕಿ, ಹೆಬ್ರಿ, ಉಡುಪಿ ನಗರ, ದಾವಣಗೆರೆ ಗ್ರಾಮಾಂತರ ಮತ್ತು ಬೆಳಗಾವಿ ಮಾರ್ಕೆಟ್‌ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

    ಆತ ಜೈಲಿನಲ್ಲಿದ್ದವನು 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ಈತ ಮಟ್ಕಾ ಅಡುವ ಚಟವುಳ್ಳವನಾಗಿದ್ದು, ಕಳವು ಮಾಡಿದ ಹಣವನ್ನು ತನ್ನ ಚಾಳಿಗಾಗಿ ಬಳಕೆ ಮಾಡಿ ಸೋತಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಬಂಧಿತನಿಂದ 20,220 ರೂ. ನಗದು, ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್‌ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಕೃತ್ಯ ಸ್ಥಳಗೈದ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆತನಿಗೆ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss