Tuesday, February 27, 2024
spot_img
More

    Latest Posts

    ಬಂಟ್ವಾಳ: ಸ್ಕೂಟರ್ ಡಿಕ್ಕಿ, ಪಾದಚಾರಿಗೆ ಗಂಭೀರ ಗಾಯ

    ಬಂಟ್ವಾಳ: ಪಾದಚಾರಿಯೋರ್ವನಿಗೆ ಸ್ಕೂಟರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಎಂಬಲ್ಲಿ ನಡೆದಿದೆ.

    ಕೊಡ್ಮಾನ್ ನಿವಾಸಿ ವಸಂತ ಕುಲಾಲ್ (53) ಗಾಯಗೊಂಡ ಪಾದಚಾರಿ ವ್ಯಕ್ತಿಯಾಗಿದ್ದಾರೆ. ವಸಂತ ಕುಲಾಲ್ ಅವರು ಫರಂಗಿಪೇಟೆ ಬಸ್ ನಿಲ್ದಾಣದ ಕಡಗೆ ನಡೆದುಕೊಂಡು ‌ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ನಿರ್ಲಕ್ಷ್ಯ ತನದಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ ಸವಾರ ಸುನಿಲ್ ಡಿಕ್ಕಿ ಹೊಡೆದಿದ್ದಾನೆ.
    ಡಿಕ್ಕಿಯ ರಭಸಕ್ಕೆ ವಸಂತ ಅವರು ರಸ್ತೆಯ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದುಡುಕುತನದ ಚಾಲನೆಯಿಂದ ಘಟನೆ ನಡೆದಿದೆ ಎಂದು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss