Monday, June 24, 2024
spot_img
More

  Latest Posts

  ಮೂಡಬಿದಿರೆ: ಶಾಲಾ ಬಸ್ ಗೆ ಕಾರು ಡಿಕ್ಕಿ-ಚಾಲಕನಿಗೆ ಗಂಭೀರ ಗಾಯ

  ಮೂಡಬಿದಿರೆ : ಶಾಲಾ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಚಾಲಕ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಬಿದಿರೆಯ ಆಲಂಗಾರಿನಲ್ಲಿ ನಡೆದಿದೆ. ಶಾಲಾ ಮಕ್ಕಳು ಅಪಾಯದಿಂದ  ಪಾರಾಗಿದ್ದಾರೆ.

   ಮೂಡುಬಿದಿರೆ ಆಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಮಕ್ಕಳನ್ನು ಮನೆಗೆ ಬಿಡಲು ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಕೆಎ09 z 7481 ನಂಬರಿನ ಕಾರು ಆಲಂಗಾರು ಬಳಿ ಬ್ರೇಕ್ ಹಾಕಿದ್ದು ತಕ್ಷಣ ಕಾರು ಬಲಕ್ಕೆ ತಿರುಗಿ ಶಾಲಾ ವಾಹನದ ಕಡೆಗೆ ಬಂದಿದೆ. ಶಾಲಾ ವಾಹನದ ಚಾಲಕ ಎಡ ಕಡೆಗೆ ವಾಹನವನ್ನು ತಿರುಗಿಸಿದ್ದು ಅಲ್ಲಿಯೇ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಾಗ ಕಾರು ಬಂದು ಗುದ್ದಿದೆ.ಕಾರಿನ ಚಾಲಕನ ಮೂಗು ಮತ್ತು ಕಿವಿಯಿಂದ ರಕ್ತ ಹರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. 

  ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ. ಶಾಲಾ ವಾಹನದ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ.

   ಕಾರಿನ ಚಾಲಕ ಮತ್ತು ಸಹ ಪ್ರಯಾಣಿಕನನ್ನು  ಆಸ್ಪತ್ರೆಗೆ ಸಾಗಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss