Saturday, October 12, 2024
spot_img
More

    Latest Posts

    ಮಗಳನ್ನು ರಕ್ಷಿಸಲು ಹೋದ ತಂದೆ-ತಾಯಿಯೂ ನೀರುಪಾಲು..!

    ಮೈಸೂರು: ಒಂದೇ ಕುಟುಂಬದ ಮೂವರು ನೀರು ಪಾಲಾದ ದಾರುಣ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ‌.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಪ್ಪ ಮಹಮ್ಮದ್ ಕಪೀಲ್ (42 ವ), ಅಮ್ಮ ಶಾವರ ಭಾನು (35 ವ), ಪುತ್ರಿ ಶಾಹೀರಾ ಭಾನು (20 ವ) ಮೃತ ದುರ್ದೈವಿಗಳು. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಅಪ್ಪ, ಅಮ್ಮನೂ ಸಾವನ್ನಪ್ಪಿದ್ದಾರೆ.

    ಅಜ್ಜಿಯ ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ನಡೆದಿದೆ.

    ಪುತ್ರಿ ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ, ಮೂವರ ಮೃತ ದೇಹ ಹೊರಕ್ಕೆ ತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss