ಪೆರ್ಲ: ಕಾನಂ ಕೇರಳ ಎಂಬ ಸಾಮಾಜಿಕ ಸಂಘಟನೆಯು ಎಂಡೋ ಸಂತ್ರಸ್ತ ವಿಭಿನ್ನ ಸಾಮಾರ್ಥ್ಯದ ಮಕ್ಕಳಿಗೆ ಸಹಾಯಕವಾಗುವ ರೀತಿಯಲ್ಲಿ ಆರ್ಥಿಕ ಸಹಕಾರ ನೀಡುವುದರೊಂದಿಗೆ ಎಣ್ಮಕಜೆ ಗ್ರಾ.ಪಂ.ನ ಸಾಂತ್ವನ ಬಡ್ಸ್ ಶಾಲೆಯ ವಿದ್ಯಾರ್ಥಿಗಳ ವಿವಿಧ ಕೌಶಲ್ಯ ಪ್ರದರ್ಶಿಸುವ ಮೂಲಕ ಓಣಂ ಆಚರಣೆಯನ್ನು ವಿಭಿನ್ನ ರೀತಿಯಲ್ಲಿ ನಡೆಸಿತು.

ಎಣ್ಮಕಜೆ ಪಂಚಾಯತು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅನಿಲ್ ಪೊನ್ನಕರ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಾನಂ ಕೇರಳಂ ಸಂಘಟನೆಯ ಪದಾಧಿಕಾರಿಗಳಾದ ಶರಫ್ ಎ.ಐ,ಸೋನಿ ಡಿ,ಜಿ,ಅಬ್ದುಲ್ ಹಕೀಂ, ನವಾಸ್, ರಾಮನುಣ್ಣಿ, ಪಂ. ಕ್ಷೇಮ ಕಾರ್ಯಸ್ಥಾಯಿ ಸಮಿತಿ ಆಧ್ಯಕ್ಷೆ ಸೌದಾಭಿ ಹನೀಫ್, ಶಿಕ್ಷಣ ಸ್ಥಾಯಿ ಸಮಿತಿ ಆಧ್ಯಕ್ಷೆ ಜಯಶ್ರೀ ಎ. ಕುಲಾಲ್, ಪಂ.ಸದಸ್ಯರಾದ ಮಹೇಶ್ ಭಟ್, ನರಸಿಂಹ ಪೂಜಾರಿ,ರಮ್ಲ,ಉಷಾ ಕುಮಾರಿ,ಮಾಜಿ ಪಂ.ಉಪಾಧ್ಯಕ್ಷೆ ಆಯಿಷಾ ಎ.ಎ, ಸಿಡಿಎಸ್ ಆಧ್ಯಕ್ಷೆ ಜಲಜಾಕ್ಷಿ, ಸಾಮಾಜಿಕ ಮುಂದಾಳು ರಾಜರಾಮ ಪೆರ್ಲ,ಪಂ.ಕಾರ್ಯದರ್ಶಿ ಅನ್ವರ್ ರೆಹಮಾನ್,ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ಮೊದಲಾದವರು ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಮರಿಯಾಂಬಿ ಸ್ವಾಗತಿಸಿ ಶಿಕ್ಷಕಿ ಜ್ಯೋತಿ ಎಸ್ ವಂದಿಸಿದರು. ಈ ಸಂದರ್ಭದಲ್ಲಿ ಕಾನಂ ಕೇರಳಂ ಸಂಘಟನೆಯ ಸಂಸ್ಥಾಪಕಿ ಬಿಂದು ಪೆರ್ನಾಂಡೊಸ್ ರಚಿಸಿದ “ಮಾರಿಕಾಲಂ”ಎಂಬ ಲೇಖನ ಸಂಕಲನದ ಮುಖಪುಟವನ್ನು ಬಿಡುಗಡೆಗೊಳಿಸಲಾಯಿತು.
