ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ನಿವೇಶ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಬೀರ್ ಆಲಿ, ಪೈಜುಲ್ಲಾ, ಜಯಮ್ಮ, ಜಗದೀಶ್, ಪೂಜಾ ಬಂಧಿತರು ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಖಾಲಿ ಸೈಟ್ ಗಳನ್ನ ಗುರುತಿಸಿ ಆ ಜಾಗದ ಮಾಲೀಕರ ದಾಖಲೆ ಪಡೆದು, ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಖಾಲಿ ಜಾಗದ ಮಾಲೀಕರ ದಾಖಲೆ ಪಡೆಯುತ್ತಿದ್ದರು. ದಾಖಲೆ ಪಡೆದು ಪ್ಯಾನ್ ಕಾರ್ಡ್, ಆರ್ಧಾರ ಕಾರ್ಡ್ ನಕಲಿ ಸೃಷ್ಟಿಸಿ, ಅಕ್ರಮವಾಗಿ ಹಣ ಸಂಪಾದನೆ ಮಾಡಲು ಬೇರೆ ಅವರ ಹೆಸರಿನಲ್ಲಿರೋ ಸೈಟ್ ಗಳ ನಕಲಿ ದಾಖಲೆ ಸೃಷ್ಠಿಸುತ್ತಿದ್ದರು.
ಆರೋಪಿಗಳು ಅಕ್ರಮವಾಗಿ ಹಣ ಸಂಪಾದನೆ ಮಾಡಿ ಮೋಜು ಮಸ್ತಿ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ವಿದ್ಯಾರಣ್ಯಪುರ , ಸಂಜಯ್ ನಗರ ಠಾಣಾ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಠಿಸಿ ಸೈಟ್ ಬೇರೊಬ್ಬರಿಗೆ ಮಾರಾಟ ಮಾಡಿರೋದು ತನಿಖೆ ವೇಳೆ ಬೆಳಕಿ ಬಂದಿದ್ದು, ಹೆಚ್ ಎಂಟಿ ಲೇಔಟ್ ನಲ್ಲಿ ಸುವರ್ಣಮ್ಮ ಎಂಬುವರಿಗೆ ಸೇರಿದ ಸೈಟ್ ನ ನಕಲಿ ದಾಖಲೆ ಸೃಷ್ಠಿಸಿ ಬೇರೆಯವರಿಗೆ ಆರೋಪಿಗಳು 65 ಲಕ್ಷಕ್ಕೆ ಮಾರಾಟ ಮಾಡಿದ್ದರು, ಘಟನೆ ಸಂಬಂದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

