ಬೆಳ್ತಂಗಡಿ:ಬಳ್ಳಾರಿಯಿಂದ ಶಬರಿಮಲೆಗೆ ತೆರಳುತ್ತಿದ್ದ ಮಿನಿ ಬಸ್ ಮುಂಡಾಜೆಯ ಬಳಿ ಅಪಘಾತವಾಗಿದ್ದು, ಹಲವರಿಗೆ ಗಾಯಗಳಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನಿಂದ ಶಬರಿಮಲೆಗೆ ಯಾತ್ರೆ ಹೊರಟವರಾಗಿದ್ದು ವಾಹನದಲ್ಲಿ 21 ಜನ ಪ್ರಯಾಣಿಕರಿದ್ದರು.ಮುಂಡಾಜೆ ಬಳಿ ಬ್ರೇಕ್ ಪೇಲ್ ಆಗಿ ಅಪಘಾತ ಸಂಭವಿಸಿದೆ.
ಗಾಯಳುಗಳಲ್ಲಿ ಹಲವರನ್ನು ಕಕ್ಕಿಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಗಂಭೀರವಾಗಿದ್ದವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
