ಮಂಗಳೂರು: ಭಾರೀ ಬಡ್ಡಿಯ ಭರವಸೆಯೊಡ್ಡಿ ಠೇವಣೆದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳನ್ನು ಲಪಟಾಯಿಸಿ ತಲೆಮರೆಸಿಕೊಂಡ ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ಲಿಮಿಟೆಡ್‌ನ ವಿರುದ್ಧ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಂತ್ರಸ್ತರೊಂದಿಗೆ ಇಂದು (05-12-2023) ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಕಳೆದ ಒಂದು ವಾರದಿಂದ ತಮ್ಮ ಹಣವನ್ನು ಹಿಂಪಡೆಯಲು ಸಂಸ್ಥೆಗೆ ತೆರಳಿದಾಗ ಅಲ್ಲಿಯ ಸಿಬ್ಬಂದಿಗಳು ಹಣ ನೀಡಲು ಸಾಧ್ಯವಿಲ್ಲ ಏಕೆಂದರೆ ಸಂಸ್ಥೆಯ ಮುಖ್ಯ ಕಛೇರಿಯಿಂದ ನಮಗೆ ಹಣ ಕಳುಹಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮತ್ತು ಕೊಡಿಯಾಲ್ ಬೈಲ್ ಸಂಸ್ಥೆಯ ಮ್ಯಾನೇಜರ್ ಗೆ ತಮ್ಮ ಹಣ ಹಿಂದಿರುಗಿಸುವಂತೆ ಪುನಃ ಪುನಃ ಬೇಡಿಕೊಂಡರೂ ಅವರು ನಮ್ಮ ಕರೆಯನ್ನು ಮೇಲಾಧಿಕಾರಿಗಳು ಸ್ವೀಕರಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸುಮಾರು ಲಕ್ಷಾಂತರ ಜನರು ಹಣ ಕಳೆದುಕೊಂಡಿದ್ದಾರೆ ಸುಮಾರು 85 ಶಾಖೆಗಳನ್ನು ಹೋಂದಿದ್ದು ಕೇವಲ ಮಂಗಳೂರಿನ ಶಾಖೆಯಲ್ಲೆ ಸುಮಾರು 60 ಲಕ್ಷಕ್ಕಿಂತ ಹೆಚ್ಚಿನ ಹಣ ಜನರಿಗೆ ಕೊಡಬೇಕಾಗಿದೆ ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ.
ಸಿಬ್ಬಂದಿ ಮತ್ತು ಸಂತ್ರಸ್ತರು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪುರವರೊಂದಿಗೆ ಪೋಲಿಸ್ ಆಯುಕ್ತರ ಕಛೇರಿಗೆ ಬೇಟಿ ನೀಡಿದರು. ಹಣ ಕಳೆದುಕೊಂಡ ಗ್ರಾಹಕರಿಗೆ ನ್ಯಾಯ ಮತ್ತು ರೋಯಲ್ ಟ್ರಾವಂಕೂರ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿಯ ಮಾಲೀಕನ ಮೇಲೆ ಸೂಕ್ತ ರೀತಿಯ ಕ್ರಮ ಕೈಗೊಂಡು ಶೀಘ್ರವಾಗಿ ಬಂಧನ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯು ಎಲ್ಲಾ ಸಂತ್ರಸ್ತರನ್ನು ಒಟ್ಟುಗೂಡಿಸಿ ಜಿಲ್ಲಾಧಿಕಾರಿಯ ಕಛೇರಿ ಮುಂದೆ ಪ್ರತಿಭಟನೆ ಸಭೆ ಕೈಗೊಳ್ಳುವುದು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.