Tuesday, July 16, 2024
spot_img
More

  Latest Posts

  ಉಡುಪಿ : ತೀವ್ರಗೊಂಡ ಮರಳಿನ ಸಮಸ್ಯೆ -ಸಮಿತಿಯ ಸದಸ್ಯ ಗುರುಪ್ರಸಾದ್ ಶೆಟ್ಟಿ ರಾಜೀನಾಮೆ

  ಉಡುಪಿ: ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಸಮಸ್ಯೆಗೆ ಪರಿಹಾರ ಕಾಣದೆ ಜಿಲ್ಲೆಯ ಸಾವಿರಾರು ಬಡ ಜನತೆಯ ನಿರ್ಮಾಣ ಹಂತದಲ್ಲಿರುವ ಮನೆಗಳು ಅತಂತ್ರ ಸ್ಥಿತಿಯಲ್ಲಿ ಸ್ಥಗಿತಗೊಂಡಿದೆ.ಇದರಿಂದಾಗಿ ಉಡುಪಿ ಜಿಲ್ಲಾಡಳಿತ ನೇಮಕ ಮಾಡಿರುವ 7 ಸದಸ್ಯರ ಮರಳು ಸಮಿತಿಯ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಇದರ ಜೊತೆಗೆ ಕಟ್ಟಡದ ನಿರ್ಮಾಣ ಕ್ಷೇತ್ರದಲ್ಲಿಯೂ ವಿಪರೀತ ತೊಂದರೆ ಉಂಟಾಗಿದೆ. ಸಾಮಾನ್ಯ ಜನರ ನಿತ್ಯ ಬವಣೆ ಅರಣ್ಯರೋಧನವಾಗಿದೆ. ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಕಾರ್ಮಿಕರು ಹಲವಾರು ಮನವಿಗಳನ್ನು ನೀಡಿದರೂ, ಮುಷ್ಕರಗಳನ್ನು ನಡೆಸಿದರೂ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯ ಜನತೆಯ ಮರಳಿನ ಬೇಡಿಕೆಯನ್ನು ಪೂರೈಸುವಲ್ಲಿ ವಿಫಲವಾಗಿರುವ ಕಾರಣ ಉಡುಪಿ ಜಿಲ್ಲೆಯ 7 ಸದಸ್ಯರ ಮರಳು ಸಮಿತಿ (ಸಿ.ಆರ್.ಝಡ್) ಸದಸ್ಯತನಕ್ಕೆ ತಾನು ಈ ಮೂಲಕ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss